ಹೊನ್ನಾವರ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ. ಮೇನ್ಸ್ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಸಿಸಿದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿರುತ್ತಾರೆ. ರೋಹನ್ ದೇಸಾಯಿ ೯೯.೨೪ ಪರ್ಸಂಟೈಲ್ ಅಂಕವನ್ನು ಪಡೆದು ಜಿಲ್ಲೆಗೆ ಒಂದನೇ ಸ್ಥಾನವನ್ನು ಪಡೆದಿದ್ದಾನೆ. ಸಂಪತ್ ನಾಯ್ಕ ೯೬.೦೫ ಪರ್ಸಂಟೈಲ್, ಶಿವಗಣೇಶ ಭೋವಿ ೯೬.೦೫, ರೋಹಿತ್ ದೇಸಾಯಿ ೯೫.೫೮ ಪರ್ಸಂಟೈಲ್ ಅಂಕವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ೮೦ ಕ್ಕೂ ಅಧಿಕ ಪರ್ಸಂಟೈಲ್ ಅಂಕವನ್ನು ಪಡೆದಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಚಾರ್ಯರು, ಬೋಧಕ- ಬೋಧಕೇತರ ಸಿಬ್ಬಂದಿಗಳು ಶುಭವನ್ನು ಹಾರೈಸಿದ್ದಾರೆ.
ಜೆಇಇ ಪರೀಕ್ಷೆ: ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ
![](https://euttarakannada.in/wp-content/uploads/2025/02/20250213_133108-730x438.jpg)