ಹೊನ್ನಾವರ : ಗ್ಯಾರಂಟಿ ಯೋಜನೆಗಳು ಬಡಜನರ ಜೀವನದಲ್ಲಿ ಬದಲಾವಣೆ ಕಂಡಿದೆ. ಅನುಷ್ಠಾನ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುತ್ತಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಹೇಳಿದರು.
ಅವರು ತಾಲೂಕು ಪಂಚಾಯತ ಸಭಾಭವನ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರ, ಇಂಧನ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯುವ ನಿಧಿ ಅಧಿಕಾರಿಗಳು ಉಪಸ್ಥಿತರಿದ್ದು ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾ. ಪಂ. ಸಹಾಯಕ ಲೆಕ್ಕಾಧಿಕಾರಿಗಳಾದ ಶ್ರೀಮತಿ ಶ್ಯಾಮಲಾ ನಾಯಕ, ಸಮಿತಿ ಸದಸ್ಯರಾದ ಗಣಪತಿ ಹಳ್ಳೆರ್, ಕೃಷ್ಣಮಾರಿಮನೆ, ಮಾರುತಿ ವೈದ್ಯ, ಜೈನಾಬಿ ಸಾಬ್, ಗಣಪತಿ ಗೌಡ, ಹೆನ್ರಿ ಲಿಮಾ, ಆದರ್ಶ ನಾಯ್ಕ, ನಾರಾಯಣ ಭಟ್, ಮಂಜುನಾಥ್ ನಾಯ್ಕ, ವಿಭಾ ಗಾವಂಕರ್, ಮಾದೇವ ಗೌಡ, ಜಗದೀಶ್ ನಾಯ್ಕ,ಅಭಿಷೇಕ್ ತಾಂಡೆಲ್, ಗುರುರಾಜ್ ನಾಯ್ಕ, ಉಪಸ್ಥಿತರಿದ್ದರು. ತಾ. ಪಂ. ನ ಬಾಲಚಂದ್ರ ನಾಯ್ಕ ಇವರು ಸ್ವಾಗತಿಸಿ ವಂದಿಸಿದರು.