ದಾಂಡೇಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿರುವ ಹಿನ್ನಲೆಯಲ್ಲಿ ದಾಂಡೇಲಿ ನಗರದ ಬಸ್ ನಿಲ್ದಾಣದ ಮುಂಭಾಗದ ಜೆ.ಎನ್ ರಸ್ತೆಯಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಶನಿವಾರ ಸಂಜೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಬುದವಂತಗೌಡ ಪಾಟೀಲ್, ಉಪಾಧ್ಯಕ್ಷರಾದ ಗುರು ಮಠಪತಿ ಮತ್ತು ಪಕ್ಷದ ಹಿಂದುಳಿದ ವರ್ಗಗಳ ಮೋರ್ಛಾದ ಅಧ್ಯಕ್ಷರಾದ ರವಿ ಗಾಂವಕರ ದೆಹಲಿಯಲ್ಲಿ 27 ವರ್ಷಗಳ ನಂತರ ಭಾರತೀಯ ಜನತಾ ಪಾರ್ಟಿ ಪ್ರಚಂಡ ಬಹುಮತಗಳಿಂದ ಅಧಿಕಾರವನ್ನು ಪಡೆದುಕೊಂಡಿದೆ. ಆಮ್ ಆದ್ಮಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಸಂದ ಗೆಲುವು ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಈ ರಾಷ್ಟ್ರದ ಪ್ರಗತಿ ಸಾಧ್ಯ ಎನ್ನುವುದನ್ನು ಅರಿತು ದೆಹಲಿಯ ಮತದಾರರು ಬಿಜೆಪಿಗೆ ಅದ್ವಿತೀಯ ಗೆಲುವನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷರುಗಳಾದ ರೋಷನ್ ನೇತ್ರಾವಳಿ, ಸುಧಾಕರ ರೆಡ್ಡಿ, ಚಂದ್ರಕಾಂತ ಕ್ಷೀರಸಾಗರ, ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ನಗರಸಭಾ ಸದಸ್ಯರುಗಳಾದ ದಶರಥ ಬಂಡಿವಡ್ಡರ, ಪದ್ಮಜಾ ಜನ್ನು, ಪಕ್ಷದ ಮುಖಂಡರಾದ ಎಂ.ಎಸ್.ನಾಯ್ಕ, ಸಾವಿತ್ರಿ ಬಡಿಗೇರ, ಪ್ರಶಾಂತ ಬಸೂರ್ತೆಕರ, ಪ್ರವೀಣ್ ಜನ್ನು, ಚೆನ್ನಬಸಪ್ಪ ಮುರಗೋಡ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.