ಜೋಯಿಡಾ : 27 ವರ್ಷಗಳ ನಂತರ ರಾಷ್ಟ್ರದ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಪ್ರಚಂಡ ಮತಗಳಿಂದ ಗೆಲುವು ಸಾಧಿಸಿ ಅಧಿಕಾರವನ್ನೇರಿದ ಹಿನ್ನಲೆಯಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಶನಿವಾರ ವಿಜಯೋತ್ಸವ ಆಚರಣೆ ಮಾಡಲಾಯಿತು.
ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡು ಪಟಾಕಿ ಸಿಡಿಸಿ, ಸಿಹಿ ಹಂಚಿ, ಜೈಕಾರ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಕಾಮ್ರೇಕರ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿದ್ದು ಜೊಕೇರಿ, ನಾಗೋಡಾ ಗ್ರಾ.ಪಂ ಉಪಾಧ್ಯಕ್ಷರಾದ ಸುಭಾಸ ಮಾಂಜ್ರೇಕರ, ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಸಂದೀಪ ಗಾವಡಾ, ಪ್ರಧಾನಿ ಗ್ರಾ.ಪಂ ಸದಸ್ಯರಾದ ಬಾಬು ಜೋಸೆಫ್, ಪ್ರಧಾನಿ ಶಕ್ತಿಕೇಂದ್ರದ ಪ್ರಮುಖರಾದ ಪ್ರಭಾಕರ್ ಅಕೋಡಿಕರ, ಯುವ ಮೋರ್ಚಾ ಸದಸ್ಯರಾದ ರೂಪೇಶ ದೇಸಾಯಿ, ಉಪಾಧ್ಯಕ್ಷರಾದ ಅನಿಲ್ ಪಟ್ಟೆ, ಗಾಂಗೋಡ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ್ ದೇಸಾಯಿ, ಬೂತ್ ಕಮಿಟಿ ಅಧ್ಯಕ್ಷರಾದ ಗಜಾನನ್ ಮಿರಾಶಿ, ಪ್ರಮುಖರಾದ ಸುರೇಶ್ ಕೋಟೆಕಲ್, ನಾಗೊ ಮಿರಾಶಿ ಹಾಗೂ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.