ಕಾರವಾರ: ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ನಾಮನಿರ್ದೆಶಿತ ಸದಸ್ಯರ ನೇಮಕ ಆಗುವವರೆಗೆ ಮತ್ತು ಪೂರ್ಣ ಪ್ರಮಾಣದ ಅರಣ್ಯ ಹಕ್ಕು ಸಮಿತಿಗಳ ರಚನೆಯಾಗುವವರೆಗೆ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಕ್ಲೇಮು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮತ್ತು ಪ್ರಧಾನಸಂಚಾಲಕ ಜಿ.ಎಂ.ಶೆಟ್ಟಿ,ಅಚಿವೆ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರನ್ನು ಭೇಟಿಮಾಡಿ ಮನವಿ ನೀಡಿ ಆಗ್ರಹಪಡಿಸಿದೆ.
ಮನವಿಯಲ್ಲಿ ‘ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮ 2006, 2008ಮತ್ತು2012ರ ತಿದ್ದುಪಡಿ ನಿಯಮದಡಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳ ರಚನೆಯಾಗದಿದ್ದರೂ ಸಹ ನಿಯಮಬಾಹೀರವಾಗಿ ಅಧಿಕಾರೇತರ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಆರಂಭಿಸಲಾಗಿದೆ .ಮತ್ತು ಕ್ಲೇಮಿನ ಪರಿಗಣನೆಗಾಗಿ ಅರಣ್ಯ ಹಕ್ಕು ನಿಯಮಕ್ಕೆ ವ್ಯತಿರಿಕ್ತವಾಗಿ ನಿರ್ದಿಷ್ಟ ಸರ್ಕಾರಿ ದಾಖಲಾತಿ ಸಾಕ್ಷ್ಯ ಹಾಜರೂಪಡಿಸುವಂತೆ ಕ್ಲೇಮುದಾರರಿಗೆ ನೋಟಿಸು ನೀಡಿ ಒತ್ತಾಯಪಡಿಸಲಾಗುತ್ತಿದ್ದು ಇದು ಕೇಂದ್ರ ಬುಡಕಟ್ಟು ಮಂತ್ರಾಲಯದ ಆದೇಶಕ್ಕೆ ವಿರುದ್ಧವಾದ ಕ್ರಮ ವಾಗಿದೆ.ಆದುದರಿಂದ ಅರಣ್ಯ ಭೂಮಿಯಲ್ಲಿನ ಬಗರ ಹುಕ್ಕುಂ ಸಾಗುವಳಿಯನ್ನು ಜಂಟಿ ತನಿಖೆಯಿಂದ ಪ್ರತ್ಯಕ್ಷ ಪರಿಶೀಲೀಸಿ ಸರ್ಕಾರದ ವತಿಯಿಂದ ದ್ರಡೀಕರಣ ನೀಡಲು ಜಿಲ್ಲಾಡಳಿತದಿಂದ ಕ್ರಮ ಆಗಬೇಕು ಎಂದು ನಿಯೋಗವು ಜಿಲ್ಲಾಧಿಕಾರಿಗಳ ಮದ್ಯಪ್ರವೇಶಕ್ಕೆ ಆಗ್ರಹ ಪಡಿಸಿದೆ. ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಪರಿಶೀಲಿಸುವ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ.ನಿಯೋಗದಲ್ಲಿ ಅಂಕೋಲಾ ತಾಲ್ಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ .ಜಿಲ್ಲಾ ಮಹಿಳಾ ಕಾಂಗ್ರೆಸ್ಸ ಅಧ್ಯಕ್ಷೆ ಸುಜಾತ ಗಾಂವ್ಕರ್,ಪ್ರಕಾಶ ನಾಯ್ಕ, ಬಿ.ಸಿ.ಸಿ.ಅಧ್ಯಕ್ಷ ಪಾಂಡುರಂಗ ಗೌಡ, ಶಂಕರ ಕೊಡಿಯಾ, ದುರ್ಗು ಹಳ್ಳೇರ ,ಪಾಂಡು ಗೌಡ ಮುಂತಾದವರು ಇದ್ದರು.