ಸಿದ್ದಾಪುರ : ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಅವರ ಹುಟ್ಟುಹಬ್ಬವನ್ನು ಸಿದ್ದಾಪುರ ಬಿಎಸ್ಎನ್‌ಡಿಪಿ ಘಟಕದವರು ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ದಿನಸಿ ವಿತರಿಸಿ, ಆಶ್ರಮವಾಸಿಗಳಿಗೆ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಿಸಿದರು.
ಪಿಎಸ್ಎನ್‌ಡಿಪಿ ಸಿದ್ದಾಪುರ ತಾಲೂಕಾ ಅಧ್ಯಕ್ಷ ವಿನಾಯಕ ದೊಡಗದ್ದೆ, ಜಿಲ್ಲಾ ಉಸ್ತುವಾರಿ ರಾಜೇಶ ಕತ್ತಿ ಕೋಲಸಿರ್ಸಿ, ತಾಲೂಕ ಉಪಾಧ್ಯಕ್ಷ ಪ್ರಶಾಂತ ಅವರಗುಪ್ಪ, ಬಿಳಗಿ ಪಂಚಾಯತ ಶಾಖೆ ಅಧ್ಯಕ್ಷ ತಿರುಮಲ ಕಲ್ಕಣಿ, ಸಿದ್ದಾಪುರ ಪಟ್ಟಣ ಪಂಚಾಯತ ಶಾಖೆ ಅಧ್ಯಕ್ಷ ದೇವರಾಜ ಹೊಸೂರು, ಸೋವಿನ ಕೊಪ್ಪ ಪಂಚಾಯತ್ ಉಸ್ತುವಾರಿ ಚಂದ್ರಕಾಂತ, ಹಲಗೇರಿ ಪಂಚಾಯತ ಶಾಖೆ ಶಿವು ಕಿಲಾರ,ಅನಿಲ್ ಕೊಠಾರಿ, ಮತ್ತಿತರರು ಉಪಸ್ಥಿತರಿದ್ದರು.