ಸಿದ್ದಾಪುರ: ತಾಲೂಕಿನ ಬಾಳೂರು ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಹಾಗೂ ಸೀಮಾ ಪರಿಷತ್ ಬಾಳೂರಿನ ನೂತನ ದೇವಾಲಯದ ಲೋಕಾರ್ಪಣೆ ಹಾಗೂ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ದೇವಾಲಯ ಲೋಕಾರ್ಪಣೆ, ಮಹಾರುದ್ರಯಾಗ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ವಿದ್ವಾನ್ ವಿಶ್ವನಾಥ ಭಟ್ಟ ನೀರಗಾನ ಹಾಗೂ ವಿ.ಚಂದ್ರಶೇಖರ ಭಟ್ಟ ಗಾಳೀಮನೆ ಇವರಿಂದ ಧಾರ್ಮಿಕ ಪ್ರವಚನ ನಡೆಯಿತು.
ಶ್ರೀಪಾದ ಹೆಗಡೆ ಸೋಮನಮನೆ, ಭಾಗ್ಯಶ್ರೀ ಹೆಗಡೆ ಬಣಗಿ, ವಿನಾಯಕ ಹೆಗಡೆ ಮುತ್ಮುರ್ಡು ಇವರಿಂದ ಗಾಯನ ಕಾರ್ಯಕ್ರಮ ಹಾಗೂ ಅನಂತ ಹೆಗಡೆ ಹೆಗ್ಗಾರಹಳ್ಳಿ ಸಹೋದರರಿಂದ ಭಕ್ತಿ ಸಂಗೀತ ನಡೆಯಿತು. ಅಜಯ್ ಹೆಗಡೆ ವರ್ಗಾಸರ, ಮಹೇಶ ಹೆಗಡೆ ಹೊಸಗದ್ದೆ, ಕೆ.ಪಿ.ಹೆಗಡೆ, ಮಹೇಶ ಭಟ್ಟ ದಾಯಿಮನೆ, ಸುಬ್ರಾಯ ಹೆಗಡೆ ಹೊಸಗದ್ದೆ, ಭರತ್ ಹೆಗಡೆ ಹೆಬ್ಬಲಸು, ನಿತಿನ್ ಹೆಗಡೆ ಕಲಗದ್ದೆ ಇವರು ಹಾರ್ಮೋನಿಯಂ ಹಾಗೂ ತಬಲಾ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಬಾಳೂರು ಸೀಮಾ ಭಕ್ತರು, ಪುರೋಹಿತರು, ಅರ್ಚಕರು, ಉಪಸ್ಥಿತರಿದ್ದರು.