ಮಾನ್ಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಾಸಕರ ಅವಧಿಯಲ್ಲಿರುವಾಗ ಅವರ ವಿಶೇಷ ಪ್ರಯತ್ನದಿಂದ ಪ್ರಾರಂಭವಾದ ಶಿರಸಿ ಬಸ್ ನಿಲ್ದಾಣದ ಕಾಮಗಾರಿ ಈಗ ಒಂದೂವರೆ ವರ್ಷದ ಈಚೆಗೆ ಕಾಂಗ್ರೆಸ್ ಸರಕಾರ ಬಂದ ನಂತರ ಕಾಂಗ್ರೆಸ್ ಸರಕಾರದ ಅಡಳಿತದಲ್ಲಿ ಬಸ್‌ಸ್ಟ್ಯಾಂಡ್ ಕಾಮಗಾರಿ ಕುಂಟುತ್ತಾ ಸಾಗಿದ್ದು, ಬಸ್ ಸ್ಟ್ಯಾಂಡ್ ಉದ್ಘಾಟನೆ ಇಂದೋ-ನಾಳೆಯೋ ಎಂದು ನಿರೀಕ್ಷೆಯಿಂದ ಸಾರ್ವಜನಿಕರು ಕಾಯುತ್ತಿದ್ದಾರೆ. ಈಗಿನ ಶಾಸಕರು ನಾಲ್ಕಾರು ತಿಂಗಳುಗಳಿಂದ ದಿನಾಂಕ ನಿಗದಿಪಡಿಸುತ್ತಿದ್ದು, ಒಂದು ಕಡೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ವಯೋವೃದ್ಧರಿಗೆ ಈಗಿನ ಬಸ್ ನಿಲ್ದಾಣದಲ್ಲಿ ಯಾವುದೇ ಮೇಲ್ಪಾವಣಿಯಾಗಲೀ ಅಥವಾ ಇನ್ಯಾವುದೇ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ನೀಡಿದ ದಿನದಿಂದ ಅರ್ಧ ಪ್ರಯಾಣಿಕರು ನಿಲ್ದಾಣದಲ್ಲಿ ಹಾಗೂ ಅರ್ಧ ಪ್ರಯಾಣಿಕರು ಬಸ್‌ನಲ್ಲಿ ಸಾಗುವ ಪರಿಸ್ಥಿತಿಯಿದ್ದು, ಪ್ರಯಾಣಿಕರು ಈ ರೀತಿಯ ಅವ್ಯವಸ್ಥೆಯನ್ನು ಕಂಡು ಸರಕಾರಕ್ಕೆ ಹಿಡಿ ಶಾಪ ಹಾಕುವಂತಾಗಿದೆ. ಇನ್ನಾದರೂ ಬಸ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ಭಾಗದ ಶಾಸಕರು ತಮ್ಮ ಬಹುದಿನಗಳ ಕನಸನ್ನು ನನಸಾಗುವಂತೆ ಮಾಡಲಿ. ಬಸ್ ನಿಲ್ದಾಣದ ಉದ್ಘಾಟನೆ ಆತೀ ಶೀಘ್ರವಾಗಿ ಆಗಲಿ ಎಂಬುದು ನಮ್ಮ ಕೋರಿಕೆ ಕೂಡ.
ಉಪೇಂದ್ರ ಪೈ
ಜೆ.ಡಿ.ಎಸ್.ಮುಖಂಡರು,