Slide
Slide
Slide
previous arrow
next arrow

ಅನಾಥ ಮಹಿಳೆಯನ್ನು ನಿರ್ಲಕ್ಷಿಸಿದ ಆಸ್ಪತ್ರೆ ಸಿಬ್ಬಂದಿ: ವೀಡಿಯೋ ವೈರಲ್

300x250 AD

ಹೊನ್ನಾವರ : ಪಟ್ಟಣದ ರಸ್ತೆ ಪಕ್ಕದಲ್ಲಿ  ಗಾಯಗೊಂಡು ಮಲಗಿಕೊಂಡಿದ್ದ ಅನಾಥ ಮಹಿಳೆಯನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ಕರೆದು ತಂದಾಗ ಕರ್ತವ್ಯದಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಅದಕ್ಕೆ ಸಂಬಂಧಪಟ್ಟ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. 

ತಾಲೂಕಿನ ಸರಕಾರಿ ಅಸ್ಪತ್ರೆಗೆ ಬುಧವಾರ ರಾತ್ರಿ ಮಹಿಳೆಯನ್ನು ಕರೆದುಕೊಂಡು ಬರಲಾಗಿದ್ದು, ಅಲ್ಲಿರುವ ವೈದ್ಯರು ನಾವು ಆಸ್ಪತ್ರೆಗೆ ಚಿಕಿತ್ಸೆ ಮಾತ್ರ ಕೊಡುತ್ತೇವೆ. ಆಸ್ಪತ್ರೆಯಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಲ್ಲದೆ, ಸರಿಯಾಗಿ ಮಾತನಾಡದೆ ಅನಾಥ ರೋಗಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. 

ತಹಸೀಲ್ದಾರರಿಗೆ ವಿಷಯ ತಿಳಿಸುತ್ತೆವೆ ಅಂದಾಗಲು, ಇವತ್ತು ರಾತ್ರಿ ಇಲ್ಲಿ ಇರಲು ಅವಕಾಶ ಕೊಡಿ ನಾಳೆ ಅವರನ್ನು ಹೊಸ ಬೆಳಕು ಆಶ್ರಮಕ್ಕೆ ಕಳಿಸಿಕೊಡುತ್ತೆವೆ ಎಂದು ಕೇಳಿಕೊಂಡರೂ ಆಸ್ಪತ್ರೆಯಲ್ಲಿ ಉಳಿಸಲು ಅವಕಾಶ ಮಾಡಿಕೊಟ್ಟಿಲ್ಲ. ಮಹಿಳೆಯನ್ನು ಅನಾಥಾಶ್ರಮಕ್ಕೆ ಸೇರಿಸಲು ಶಾಸಕ ದಿನಕರ ಶೆಟ್ಟಿಯವರು ಅಂಬುಲೆನ್ಸ್ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. 

300x250 AD

ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಕೆಲವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಪೊಲೀಸರು ಇರುವ, ಮಹಿಳೆ ಕಾಲು ಪೆಟ್ಟಾಗಿ ಮಲಗಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡಿದೆ.

Share This
300x250 AD
300x250 AD
300x250 AD
Back to top