Slide
Slide
Slide
previous arrow
next arrow

ಸತ್ಯಂ ಅಕಾಡೆಮಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ: ಕ್ಯಾಲೆಂಡರ್ ಬಿಡುಗಡೆ

300x250 AD

ಶಿರಸಿ: ನಗರದ ಪ್ರಗತಿ ಪಥ ಪೌಂಡೇಷನ್‌ನ ಭಾಗವಾದ ಸತ್ಯಂ ಅಕಾಡೆಮಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜರುಗಿತು.

ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅತಿಥಿಯಾಗಿದ್ದ ದಿವಾಕರ ಕೆ.ಎಮ್. ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಭವಿಷ್ಯದ ಕುರಿತು ಕನಸು ಕಾಣಬೇಕು. ನಂತರ ಕನಸನ್ನು ನನಸಾಗಿಸಿಕೊಳ್ಳಲು ಸತತ ಪರಿಶ್ರಮ ಪಡಬೇಕಾಗುತ್ತದೆ. ನಿರಂತರ ಅಧ್ಯಯನದೊಂದಿಗೆ ಹೊಸ ವಿಚಾರಗಳನ್ನು ಕಲಿಯುತ್ತಾ ಜ್ಞಾನವೃದ್ಧಿ ಮಾಡಿಕೊಳ್ಳಬೇಕಾಗುತ್ತದೆ. ಈ ಕಲಿಕಾ ಹಂತದಲ್ಲಿ ಇನ್ನೊಂದು ಮುಖ್ಯ ಅಂಶವೆಂದರೆ ಆತ್ಮವಿಶ್ವಾಸ. ಯಾವುದೇ ಸವಾಲು ಅಥವಾ ಸೋಲು ಈ ಸಂದರ್ಭಗಳಲ್ಲಿ ಭಯ, ನಿರಾಶೆಗೆ ಒಳಗಾಗದೇ ಅಧ್ಯಯನದ ಕಡೆ ಗಮನಹರಿಸಬೇಕು. ಅನೇಕ ವ್ಯಕ್ತಿಗಳ ಜೀವನ ವೃತ್ತಾಂತಗಳು ತಮಗೆಲ್ಲರಿಗೂ ಸ್ಪೂರ್ತಿದಾಯಕವಾಗಬೇಕು.  ಉದಾಹರಣೆಗೆ ಮೈಕಲ್ ಫೆಲ್ಫ್ ಅಪ್ರತಿಮ ಈಜುಗಾರನಾಗಿ ಬೀಜಿಂಗ್ ಓಲಂಪಿಕ್‌ನಲ್ಲಿ ಎಂಟು ಬಂಗಾರದ ಪದಕ ಪಡೆದ ವ್ಯಕ್ತಿ. ಅವರು ಅಪಘಾತವೊಂದರಲ್ಲಿ ಎರಡೂ ಕೈಗಳಿಗೆ ತೊಂದರೆಯಾಗುತ್ತದೆ. ಈಜಲು ಅವಶ್ಯವಾದ ಕೈಗಳೇ ಸಹಜ ಸ್ಥಿತಿಯಲ್ಲಿಲ್ಲದಾದಾಗ ಎದೆಗುಂದದೇ ಬ್ಯಾಂಡೇಜ್ ಧರಿಸಿಕೊಂಡೇ ಸತತ ತಯಾರಿ ನಡೆಸಿ ಯಶ್ವಿಯಾದ ನಿದರ್ಶನವಿದೆ. ಅದೇ ರೀತಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ನವಜೋತ್ ಸಿಂಗ್ ಅವರಿಬ್ಬರೂ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಆಡುವ ಸಂದರ್ಭ. ರಭಸದ ಬೌಲಿಂಗ್‌ಗೆ ಸಚಿನ್ ತೆಂಡುಲ್ಕರ್ ಗಾಯಗೊಂಡು ಮೂರ್ಚೆ ತಪ್ಪುತ್ತಾರೆ. ಪುನಃ ಎಚ್ಚರಗೊಂಡಾಗ ಗಾಯದ ಕಾರಣದಿಂದ ಪೆವಿಲಿಯನ್‌ಗೆ  ತೆರಳಲು ಆಟಗಾರರು ಕೇಳಿಕೊಂಡರೂ ಒಪ್ಪದೇ ಅಂತಹ ಸಮಯದಲ್ಲೂ ಪುನಃ ಅದೇ ಆತ್ಮವಿಶ್ವಾಸದಿಂದ ಆಡಿ ಪಂದ್ಯವನ್ನು ಗೆಲ್ಲಿಸಿದ ಘಟನೆ ನೆನಪಿಸಿಕೊಳ್ಳಬೇಕು. ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ನೀಡಬಹುದಾದ ಘಟನೆಗಳಿವು. ಅಮೆರಿಕಾದ ವಿಲ್ಮಾ ರುಡಾಲ್ಫ ಇವಳು ಬಾಲ್ಯದಲ್ಲೇ ನ್ಯುಮೋನಿಯಾ ಸಮಸ್ಯೆಯಿಂದ ಎರಡೂ ಕಾಲುಗಳ ನಡೆದಾಡುವ ಸ್ಥಿತಿ ಕಳೆದುಕೊಳ್ಳುತ್ತಾಳೆ. ಕೃತಕ ಕಾಲು ಜೋಡಿಸಲಾಗುತ್ತದೆ. ಆದರೆ ತಾನೊಬ್ಬ ಕ್ರೀಡಾಪಟುವಾಗಬೇಕೆಂಬ ಹಂಬಲದಿಂದ ತನ್ನ 14 ವರ್ಷದ ವಯಸ್ಸಿನಲ್ಲಿ ತರಬೇತುದಾರರ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯನ್ ಓಲಂಪಿಕ್ಸ್ನಲ್ಲಿ ಭಾಗವಹಿಸಿ 400 ಮೀ. ಓಟದಲ್ಲಿ ಪದಕ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಅವಳಿಗೆ ಈ ಸಾಧನೆಗೆ ಸ್ಪೂರ್ತಿಯಾದದ್ದು ಅವಳ ಬದ್ಧತೆ ಮತ್ತು ಪರಿಶ್ರಮ. ಹೀಗೆ ಜೀವನದಲ್ಲಿ ಕನಸುಗಳು ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಈ ಎರಡೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಮೊದಲು ತಮ್ಮ ಗುರಿಯನ್ನು ನಿರ್ಧರಿಸಬೇಕು. ತದನಂತರ, ಅದಕ್ಕೆ ಪೂರಕವಾದ ತಯಾರಿಗೆ ತೊಡಗಬೇಕು. ಸಾಧಿಸಬೇಕಾದ ವಿಷಯದಲ್ಲಿ ಆಸಕ್ತಿ ಮತ್ತು ಬದಲಾಗದ ಮನಸ್ಥಿತಿ ಮುಖ್ಯ. ಪ್ರತಿಯೊಬ್ಬರಲ್ಲಿ ಸುಪ್ತ ಪ್ರತಿಭೆ ಇರುತ್ತದೆ. ಶಿಕ್ಷಕರ ಮಾರ್ಗದರ್ಶನ ಮತ್ತು ಸಮಯದ ಸದುಪಯೋಗ ಪಡೆದು ಕಲಿಕೆಗೆ ಒಳಗಾಗಬೇಕು. ಈ ಅಕಾಡೆಮಿಯ ವಿದ್ಯಾರ್ಥಿಯಾಗಿ ತಮಗೆ ಅನೇಕ ಕನಸುಗಳಿವೆ. ಈ ಹಂತದಲ್ಲಿ ಕಲಿಕೆಗೆ ಪ್ರಾಶಸ್ತ್ಯ ನೀಡಿ, ಉನ್ನತ ವ್ಯಾಸಂಗ ಮಾಡಿ, ಸಾಧನೆಯ ಉತ್ತುಂಗಕ್ಕೇರುವುದು ನಿಮ್ಮ ಗಮನವಾಗಬೇಕು. ಎಚ್ಚರಿಕೆಯಿಂದ, ತಂದೆ-ತಾಯಿಗಳ ಆಶಯದಂತೆ ಕಲಿತು ಬದುಕು ರೂಪಿಸಿಕೊಳ್ಳಬೇಕು. ಸ್ನೇಹಿತರು ನಿಮ್ಮ ಕಲಿಕೆಗೆ ಸ್ಪೂರ್ತಿದಾಯಕವಾಗಿರಬೇಕು. ನಿಮ್ಮ ಗೆಲುವಿನ ಕ್ಷಣದಲ್ಲಿ ಪಾಲಕರ ಮುಂದೆ ಹಂಚಿಕೊಳ್ಳುವ, ಅನೇಕರನ್ನು ಪ್ರೇರೇಪಿಸುವ, ಧನಾತ್ಮಕ ಯೋಚನೆ ಉಳ್ಳವರಾಗಿರುವುದು, ಇವೆಲ್ಲಾ ಉತ್ತಮ ವಿದ್ಯಾರ್ಥಿಯ ಜವಾಬ್ದಾರಿ. ಅನುಭವ ಜ್ಞಾನದ ಮೂಲಕ ಕಲಿತ ವಿಷಯವನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡಿ ಲಭ್ಯವಿರುವ ಅನುಭವಗಳನ್ನು ಸೂಕ್ಷö್ಮವಾಗಿ ಗುರ್ತಿಸಿ ಉಪಯೋಗಿಸಿಕೊಳ್ಳಬೇಕು. ಜ್ಞಾನ ಸಂಪಾದನೆಯ ಅವಧಿಯಲ್ಲಿ ಸಂಶೋಧನಾ ದೃಷ್ಟಿಕೋನ, ಪುಸ್ತಕಗಳ ನಿರಂತರ ಅಧ್ಯಯನ, ಬುದ್ಧಿಗೆ ಕಡಿವಾಣ, ಗುರಿಗೆ ತಕ್ಕುದಾದ ತಯಾರಿ ಸಹಕಾರಿಯಾಗಲಿವೆ ಎಂದರು.


ಅಕಾಡೆಮಿಯ ನಿರ್ದೇಶಕರಾದ ಡಾ. ಸತೀಶಕುಮಾರ ನಾಯ್ಕ ಇವರು ಮಾತನಾಡಿ ವಿದ್ಯಾರ್ಥಿಗಳ ಕಲಿಕೆಗೆ ಮನೋವೇದಿಕೆ ಸಿದ್ಧಪಡಿಸುವಲ್ಲಿ ಪ್ರೇರಣಾದಾಯಕ ಮಾತುಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ ಅಕಾಡೆಮಿಯಲ್ಲಿ ನಿರಂತರವಾಗಿ ಅಕಾಡೆಮಿಯ ಪ್ರೌಢ ಶಿಕ್ಷಣ ವಿಭಾಗ, ಪಿಯು, ನೀಟ್, ಕೆಸಿಇಟಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಉಪನ್ಯಾಸ ಹಮ್ಮಿಕೊಂಡು ಕಲಿಕೆಗೆ ಉತ್ತೇಜಿಸುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲಾಗುತ್ತಿದೆ. ಇಂದು ಹೊಸ ವರ್ಷದ ಸಂದೇಶದ ರೂಪದಲ್ಲಿ ವಿಶೇಷ ಉಪನ್ಯಾಸ ನಡೆದಿದ್ದು ಸವಾಲು ಎದುರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕಾದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದರು.

300x250 AD

ಅಕಾಡೆಮಿಯ ವಿವಿಧ ವಿಭಾಗಗಳ ಸಂಯೋಜಕರುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರಾದ ಪ್ರತಿಮಾ ಹೆಗಡೆ, ಸೌಮ್ಯಾ ಎಂ., ಬಿಂದು ಶಿರಸಿ, ನೇತ್ರಾವತಿ, ಶರಾವತಿ ದೇವಡಿಗ ಮೊದಲಾದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗಿಯಾದರು.

Share This
300x250 AD
300x250 AD
300x250 AD
Back to top