ಕಾರವಾರ: ಜಿಲ್ಲೆಯಲ್ಲಿರುವ “ಬಿ” ಪ್ರವರ್ಗದ 4 ಹಾಗೂ “ಸಿ” ಪ್ರವರ್ಗದ 22 ಅಧಿಸೂಚಿತ ಸಂಸ್ಧೆ / ದೇವಾಲಯಕ್ಕೆ 9 ಸದಸ್ಯರಿರುವ ( ದೇವಸ್ಥಾನದ ಪ್ರಧಾನ ಅರ್ಚಕ/ಅರ್ಚಕ ಒಬ್ಬರು, ಪ.ಜಾತಿ/ಪಂಗಡ ಒಬ್ಬರು, ಮಹಿಳೆಯರು ಇಬ್ಬರು, ದೇವಸ್ಥಾನ/ಸಂಸ್ಥೆ ಇರುವ ಪ್ರದೇಶದ ಸ್ಥಳೀಯರು ಒಬ್ಬರು, ಇತರೆ 4 ಜನ ) ವ್ಯವಸ್ಧಾಪನಾ ಸಮಿತಿಯನ್ನು 3 ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾಧಿಗಳು/ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಿ ಪ್ರವರ್ಗದ ದೇವಸ್ಥಾನ: ಕಾರವಾರ ತಾಲೂಕಿನ ಬಾಡ ನಂದನಗದ್ದಾದ ಶ್ರೀ.ಮಹಾದೇವ ವಿನಾಯಕ ದೇವಸ್ಥಾನ, ಕುಮಟಾ ತಾಲೂಕಿನ ಗೋಕರ್ಣದ ಶ್ರೀ.ತಾಮೃಗೌರಿ (ಪಾರ್ವತಿ ದೇವಿ) ದೇವಸ್ಥಾನ, ಶಿರಸಿ ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನ, ಭಟ್ಕಳ ತಾಲೂಕಿನ ಸೋಡಿಗದ್ದೆ ಶ್ರೀ.ಮಹಾಸತಿ ದೇವಸ್ಥಾನ.
ಸಿ ಪ್ರವರ್ಗದ ದೇವಸ್ಥಾನ: ಕಾರವಾರ ತಾಲೂಕಿನ ಅಸ್ನೋಟಿಯ ಶ್ರೀ.ಕಾಮಾಕ್ಷೀ ರಾಜೇಶ್ವರಿ, ಮಹಾಗಣಪತಿ ಮಹಾಪುರುಷ ದೇವಸ್ಥಾನ, ನಂದನಗದ್ದಾದ ಶ್ರೀ ನಾಗನಾಥ ದೇವಾಸ್ಥಾನ, ತೋಡೂರಿನ ಶ್ರೀ ಮಹಾದೇವ ಮತ್ತು ಗೋವಿಂದ ದೇವಸ್ಥಾನ, ಚೆಂಡಿಯಾದ ಶ್ರೀ ಮಹಾದೇವ ಶ್ರೀ ಕೇಶವ ನಾರಾಯಣ, ಭೂದೇವಿ ದೇವಸ್ಥಾನ, ಅಂಕೋಲಾ ತಾಲೂಕಿನ ಮಂಜುಗುಣಿ ಶ್ರೀ ವಿನಾಯಕ ದೇವಸ್ಥಾನ, ಶ್ರೀ ಗಣಪತಿ ದೇವಸ್ಥಾನ, ಶ್ರೀ ಕೊಗ್ರೆ ಗ್ರಾಮ ದೇವ (ಬೊಮ್ಮಯ್ಯ) ದೇವಸ್ಥಾನ, ಬೆಳೆಸೆಯ ಶ್ರೀ ದುರ್ಗಾದೇವಿ ದೇವಸ್ಥಾನ, ಕುಮಟಾ ತಾಲೂಕಿನ ಹನೇಹಳ್ಳಿ ಶ್ರೀ ಗ್ರಾಮದೇವಿ ದೇವಸ್ಥಾನ, ಮಿರ್ಜಾನದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಹೊನ್ನಾವರ ತಾಲೂಕಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನ, ಶ್ರೀ ಅರಸಿ ಶಂಭುಲಿಂಗ ದೇವಸ್ಥಾನ, ಭಟ್ಕಳ ತಾಲೂಕಿನ ಮಾರುಕೇರಿಯ ಶ್ರೀ ಶಂಭುಲಿಂಗ ದೇವಸ್ಥಾನ, ಬೆಳಕೆಯ ಶ್ರೀ ವಿನಾಯಕ ದೇವಸ್ಥಾನ, ಬೈಲೂರಿನ ಶ್ರೀ ಚಿದಾನಂದೇಶ್ವರ ಗೋಪಾಲಕೃಷ್ಣ ಕನ್ನಮ್ಮ (ಮಾರ್ಕಾಂಡೇಯ) ದೇವಸ್ಥಾನ, ಶಿರಸಿ ತಾಲೂಕಿನ ಗೋಣುರು ಶ್ರೀ ಮಾಸ್ತಮ್ಮ ದೇವಸ್ಥಾನ, ಗಣೇಶನಗರ ಶ್ರೀ ಮಾರುತಿ ದೇವಸ್ಥಾನ, ಸಿದ್ದಾಪುರ ತಾಲೂಕಿನ ಬೇಡ್ಕಣಿ ಶ್ರೀ ಕೋಟಿ ಹನುಮಂತ ದೇವಸ್ಥಾನ, ಮಲೇನಳ್ಳಿ ಕಾನಸೂರು ಶ್ರೀ ಕೇಶವ ದೇವಸ್ಥಾನ, ಹಳಿಯಾಳ ತಾಲೂಕಿನ ಹವಗಿ ಶ್ರೀ ಕಲ್ಮೇಶ್ವರ ದೇವಸ್ಥಾನ, ಜೋಯಿಡಾ ತಾಲೂಕಿನ ಅಂಬೋಲಿಯ (ರಾಮನಗರ) ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ದಾಂಡೇಲಿ ತಾಲೂಕಿನ ಶ್ರೀ ಮಾರುತಿ ಮಂದಿರ ದೇವಸ್ಥಾನಗಳು.
ಕನಿಷ್ಟ 25 ವರ್ಷ ವಯಸ್ಸಾಗಿರವ ಆಸಕ್ತ ಭಕ್ತಾಧಿಗಳು/ಸಾರ್ವಜನಿಕರು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆ -1 (ಬಿ)ರಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಜ.27 ರೊಳಗಾಗಿ ನೇರವಾಗಿ ಪದನಿಮಿತ್ತ ಕಾರ್ಯದರ್ಶಿ ಜಿಲ್ಲಾ ಧಾರ್ಮಿಕ ಪರಿಷತ್ ಮತ್ತು ಸಹಾಯಕ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಚೇರಿಗೆ ನಿಗದಿತ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದು ತದನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
(ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯರಾಗಲು ಇರುವ ಅರ್ಹತೆ, ಅನರ್ಹತೆ ವಿವರಗಳು ಕಾರವಾರ, ಅಂಕೋಲಾ, ಕುಮಟಾ, ಹೋನ್ನವರ, ಭಟ್ಕಳ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ ಹಾಗೂ ದಾಂಡೇಲಿ ತಹಶೀಲ್ದಾರ ಕಾರ್ಯಾಲಯ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಜರಾಯಿ ಶಾಖೆಯಲ್ಲಿ ಪಡೆಯಬಹುದೆಂದು ಜಿಲ್ಲಾ ಧಾರ್ಮಿಕ ಪರಿಷತ್ನ ಪದನಿಮಿತ್ತ ಕಾರ್ಯದರ್ಶಿ ಹಾಗೂ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.