ಕಾರವಾರ: ವಾಕರಸಾ ಸಂಸ್ಧೆಯು ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದ್ದು, 2024 ನೇ ಸಾಲಿನಲ್ಲಿ ವಿತರಿಸಿರುವ , ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ಫೆ.28 ವರೆಗೆ ಮಾನ್ಯತೆ ಮಾಡಲಾಗಿದೆ. ಸದರಿ ಫಲಾನುಭವಿಗಳು ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ಗಳನ್ನು ಪಡೆಯಲು ನಗದು ಅಧವಾ ಡಿ.ಡಿ. ರೂಪದಲ್ಲಿ ರೂ.660.00 ಪಾವತಿಸಿ ಹಾಗೂ ಹಳೇ ಪಾಸನ್ನು ಹಿಂದಿರುಗಿಸಿ ಫೆ.28 ರೊಳಗಾಗಿ ನವೀಕರಣ ಮಾಡಿಕೊಳ್ಳಬೇಕು. ತದನಂತರದಲ್ಲಿ ಅಂಗವಿಕಲರ ಪಾಸುಗಳ ನವೀಕರಣಕ್ಕೆ ಅವಕಾಶವಿರುವುದಿಲ್ಲ.
2025 ನೇ ಸಾಲಿನ ವಿಕಲಚೇತನ ಬಸ್ ಪಾಸ್ ವಿತರಣೆಯನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ದಾಖಲಿಸಿ ಪಾಸ್ ಪಡೆಯುವಂತೆ ವಾಕರಸಾ ಸಂಸ್ಥೆಯ ಶಿರಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.