Slide
Slide
Slide
previous arrow
next arrow

ಶೇ.50 ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕಗಳು ಲಭ್ಯ

300x250 AD

ಕಾರವಾರ- ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕಗಳು ಈ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಜನವರಿ ಮಾಹೆಯಲ್ಲಿ 50% ರಿಯಾಯಿತಿಯಂತೆ ಹಾಗೂ ಉಳಿದ ತಿಂಗಳಿನಲ್ಲಿ 10 ವರ್ಷ ಮೇಲ್ಪಟ್ಟ ಅವಧಿಯ ಪುಸ್ತಕಗಳು ಸಾರ್ವಜನಿಕರಿಗೆ 50% ಹಾಗೂ ಪುಸ್ತಕ ಮಾರಾಟಗಾರಿಗೆ 55% ರಿಯಾಯಿತಿ ನೀಡಲಾಗುತ್ತದೆ.
6 ವರ್ಷದಿಂದ 10 ವರ್ಷ ವರ್ಷದ ಅವಧಿಯ ಪುಸ್ತಕಗಳು ಸಾರ್ವಜನಿಕರಿಗೆ 30% ಹಾಗೂ ಪುಸ್ತಕ ಮಾರಾಟಗಾರರಿಗೆ 35% ರಿಯಾಯಿತಿ, 3 ವರ್ಷದಿಂದ 5 ವರ್ಷಗಳ ಅವಧಿಯ ಪುಸ್ತಕಗಳು ಸಾರ್ವಜನಿಕರಿಗೆ 20% ಹಾಗೂ ಪುಸ್ತಕ ಮಾರಾಟಗಾರರಿಗೆ 25% ರಿಯಾಯಿತಿ, ಹೊಸ ಪ್ರಕಟಣೆಗಳು 2 ವರ್ಷದ ಅವಧಿವರೆಗೆ ಸಾರ್ವಜನಿಕರಿಗೆ 15% ಪುಸ್ತಕ ಮಾರಾಟಗಾರರಿಗೆ 20% ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top