ಶಿರಸಿ: ನಗರದ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿಜ್ಞಾನ ಶಿಕ್ಷಕರಾದ ಕೆ.ಎಲ್.ಭಟ್ ಮಾರ್ಗದರ್ಶನದಲ್ಲಿ ದರ್ಶನ್ ಬಾಗೇವಾಡಿ ಮತ್ತು ರಕ್ಷಿತಾ ಹೆಗಡೆ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಹಿರಿಯರ ವಿಭಾಗದ ಪ್ರೊಜೆಕ್ಟ್ ಮಂಡನೆಯಲ್ಲಿ ಪ್ರಶಸ್ತಿಗಳಿಸಿ ಜನೆವರಿ 3 ರಿಂದ 6 ರವರೆಗೆ ಭೋಪಾಲ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇವರು ಟೆಕ್ನಲಾಜಿಕಲ್ ಇಕೊಸಿಸ್ಟಮ್ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮಾಡಿದ್ದರು.ಬೆಳಗಾವಿಯಲ್ಲಿ ನಡೆದ ಕಿರಿಯರ ರೀಜನಲ್ ವಿಭಾಗದಲ್ಲಿ ಸಾತ್ವಿಕ್ ಭಟ್ಟ ಮತ್ತು ಸಿಂಧು ಆಚಾರಿ ಮಂಡಿಸಿದ ಥಾರ್ನ್ ಪ್ಲಾಂಟ್ಸ್ ರಿಮುವರ್ ಪ್ರೊಜೆಕ್ಟ್ ಪ್ರಥಮ ಸ್ಥಾನ ಗಳಿಸಿ ಜನೆವರಿ 10 ರಿಂದ 12 ರವರೆಗೆ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಅಭಿಷೇಕ ನಾಯ್ಕ ಮತ್ತು ಅನಿಲ್ ನಾಯ್ಕ ತಾಂತ್ರಿಕ ನೆರವು ನೀಡಿದ್ದಾರೆ. ಅಲ್ಲದೆ ಡಿಸೆಂಬರ್ ತಿಂಗಳಲ್ಲಿ ಗುವಾಹತಿಯಲ್ಲಿ ನಡೆದ 4 ದಿನಗಳ ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ 2024 ದಲ್ಲಿ ಕೆ.ಎಲ್.ಭಟ್ಟರವರು “ವಿಜ್ಞಾನಿಕಾ” ಮಂಡನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಯಾಗಿ ಭಾಗವಹಿಸಿದ್ದರು. ಈ ಎಲ್ಲ ಸಾಧನೆಗೆ ಕಾರಣೀಕರ್ತರಾದವರನ್ನು ಉಪನಿರ್ದೇಶಕರಾದ ಪಿ.ಬಸವರಾಜ, ಕ್ಷೇತ್ರಶಿಕ್ಷಣಾಧಿಕಾರಿಗಳು ಎನ್.ಸಿ.ನಾಯ್ಕ,ಮುಖ್ಯಾಧ್ಯಾಪಕರು ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದವರು ಆಭಿನಂದಿಸಿದ್ದಾರೆ.