ಶಿರಸಿ : ಬೆಂಗಳೂರಿನಲ್ಲಿ ನಡೆಯಲಿರುವ ಮೂರು ದಿನಗಳ ವಿಶ್ವ ಹವ್ಕಕ ಸಮ್ಮೇಳನದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಬದುಕನ್ನು ಮುಡುಪಾಗಿಟ್ಟ ಲಕ್ಷ್ಮೀನಾರಾಯಣ ಆರ್.ಭಟ್ಟ ತೆಪ್ಪ (87 ವರ್ಷ) ಅವರು ಹವ್ಯಕ ಶಿಕ್ಷಕ ರತ್ನ ವಿಶ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಿನಕರ ದೇಸಾಯಿಯವರು ಸ್ಥಾಪಿಸಿದ ಕೆನರಾ ವೆಲ್ಫೇರ್ ಟ್ರಸ್ಟ್‌ನ ವಿವಿಧ ವಿದ್ಯಾ ಕೇಂದ್ರಗಳಲ್ಲಿ ಶಿಕ್ಷಕರಾಗಿ 32 ವರ್ಷ ಅಪೂರ್ವ ಸೇವೆ ಸಲ್ಲಿಸಿರುವ ಎಲ್.ಆರ್.ಭಟ್ಟ ಶಿಕ್ಷಣ ಕ್ಷೇತ್ರದಲ್ಲಿ ಚಿಂತಕರಾಗಿ, ಸಾಹಿತಿಯಾಗಿ. ಪರ್ತಕರ್ತರಾಗಿ, ನಿರ್ದೇಶನ, ನಟ ಹಾಗೂ ನಾಟಕಕಾರನಾಗಿ, ಯಕ್ಷಗಾನದಲ್ಲಿ ಪಾತ್ರಧಾರಿಯಾಗಿ, ಸಮಾಜ ಸೇವಕರಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.
ಅವರು ಕುಮಾರವ್ಯಾಸ ರಾಮಾಯಣ. ಕಥಾ ಸಾಗರ ಗದ್ಯಾನುವಾದ (800 ಪುಟ) ಸೇರಿದಂತೆ ಹದಿನೆಂಟು ಕೃತಿ ಗಳನ್ನು ರಚಿಸಿದ್ದಾರೆ. ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಪುರಸ್ಕಾರಗಳು ಸೇರಿದಂತೆ ದೇಶ, ವಿದೇಶಗಳಲ್ಲಿ ಸನ್ಮಾನಿಸಿ ಸತ್ಕರಿಸಲಾಗಿದೆ. 2017 ರಿಂದ ರಾಮಚಂದ್ರಾಪುರ ಮಠದ ಅಂಬಾಗಿರಿಯ ಕಾಳಿಕಾ ಭವಾನಿ ದೇವಳದ ದಿಗ್ದರ್ಶಕರಾಗಿದ್ದಾರೆ.