ಹೊನ್ನಾವರ:ನಾವು ಆರೋಗ್ಯವಂತರಾಗಿರಲು ಕ್ರೀಡೆ ಬೇಕು. ಆರೋಗ್ಯದ ಮೂಲ ವ್ಯಾಯಾಮ. ಶಿಸ್ತುಬದ್ಧ ಜೀವನ ಕ್ರಮ ಇಲ್ಲದೆ ಇಂದು ನಮ್ಮ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಆಟ ಪಾಠಗಳಲ್ಲಿ ಭಾಗವಹಿಸಿ ಮುಂದೊಂದು ದಿನ ಶಾಲೆ ಹಾಗೂ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿಗಳಾಗಿ ಎಂದು ಕೊಳಗದ್ದೆ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿ ಹಾಗೂ ಲೈಫ್ ಇನ್ಶೂರೆನ್ಸ್ ಅಡ್ವೈಸರ್ ಜಿ.ಎಂ ಹೆಗಡೆ ಹೇಳಿದರು .
ಅವರು ಶ್ರೀ ಸಿದ್ಧಿವಿನಾಯಕ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ವಿದ್ಯಾಮಂದಿರ ಶಾಲೆಯ ಮಕ್ಕಳ ಶಿಸ್ತು & ಗೌರವಪೂರ್ವ ನಡವಳಿಕೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ .ಎಲ್. ನಾಯ್ಕ ಮಾತನಾಡಿ ಒಬ್ಬ ದೈಹಿಕವಾಗಿ ಸದೃಢನಾಗಲು ಕ್ರೀಡೆ ಅತಿ ಮುಖ್ಯ ಕ್ರೀಡೆಯಲ್ಲಿ ತೊಡಗಿಕೊಂಡವನಿಗೆ ಆರೋಗ್ಯದ ಸಮಸ್ಯೆಯಿಂದ ದೂರ ಇರಬಹುದು ಎಂದರು.
ಅತಿಥಿ ಹಾಗೂ ಉದ್ಘಾಟಕರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ವಿದ್ಯಾರ್ಥಿಗಳು ತಮ್ಮ-ತಮ್ಮ ತಂಡಗಳೊಂದಿಗೆ ಕ್ರೀಡಾ ಧ್ವಜವನ್ನು ಹಿಡಿದು , ಗಣ್ಯರನ್ನು ಪಥ ಸಂಚಲನದ ಮೂಲಕ ಗೌರವಿಸಿದರು. ಕ್ರೀಡಾ ಜ್ಯೋತಿಯನ್ನು ಎತ್ತಿ ಹಿಡಿದು ಕ್ರೀಡಾಕೂಟಕ್ಕೆ ಶುಭ ಚಾಲನೆಯನ್ನು ನೀಡಿ,ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಹೆಗಡೆ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಮೋದ್ ಅಂಬಿಗ ಹಾಗೂ ಶಾಲಾ ಸಂಸತ್ತಿನ ಸದಸ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರತಿಕ್ಷ ಭಟ್ ಪ್ರಾರ್ಥಿಸಿ, ಶಿಕ್ಷಕಿರಾದ ರೇಷ್ಮಾ ಮತ್ತು ಜ್ಯೋತಿ ಭಟ್ ನಿರೂಪಿಸಿದರು. ಶಿಕ್ಷಕಿ ಹಾರ್ದಿಕ ವಂದಿಸಿದರು.