ದಾಂಡೇಲಿ : ನಗರದ ಯುವ ಉದ್ಯಮಿ ಅಸ್ಲಾಂ ನೀರಲಗಿ ಅವರ ಮಾಲೀಕತ್ವದ ಸಹೇಲಿ ಲಾಡ್ಜಿಗೆ ಹೆಸ್ಕಾಂ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸೈಯದ್ ಅಜೀಂಪೀರ್ ಖಾದ್ರಿ ಅವರು ಭೇಟಿ ನೀಡಿ, ವಸತಿ ಗೃಹ ಕಟ್ಟಡ ಮತ್ತು ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಉದ್ಯಮಕ್ಕೆ ಶುಭವನ್ನು ಕೋರಿದರು.
ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು ಅಸ್ಲಾಂ ನೀರಲಗಿ ಶಾಲು ಹೊದೆಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಹೇಲಿ ಲಾಡ್ಜಿನ ಮಾಲಕರಾದ ಅಸ್ಲಾಂ ನೀರಲಗಿ ಮತ್ತು ದಾವಲಸಾಬ ನೀರಲಗಿಯವರ ಜೊತೆ ಕೆಲವೊಂದು ಚರ್ಚೆ ನಡೆಸಿ, ಹತ್ತಾರು ಜನರಿಗೆ ಉದ್ಯೋಗವನ್ನು ಕೊಡುವ ಈ ಉದ್ಯಮವು ಉನ್ನತಿಯನ್ನು ಸಾಧಿಸಲೆಂದು ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಹೆಸ್ಕಾಂನ ಕುಮಾರ್ ಕರಗಯ್ಯ, ಮಂಜುನಾಥ ನಾಯ್ಕ ಹಾಗೂ ಅಸ್ಲಾಂ ನೀರಲಗಿ ಸಹೋದರರು ಉಪಸ್ಥಿತರಿದ್ದರು.