ಸಿದ್ದಾಪುರ: ತಾಲೂಕು ಕೃಷಿಕ ಸಮಾಜದ 2024-25 ರಿಂದ 2029-30ರ ಅವಧಿಯ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಇತ್ತೀಚೆಗೆ ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಸದಸ್ಯರುಗಳಾಗಿ ಆಯ್ಕೆಯಾದ ವೀರಭದ್ರ ರಾಮ ನಾಯ್ಕ, ಹನುಮಂತಪ್ಪ ತಿಮ್ಮ ನಾಯ್ಕ, ಪಿ.ವಿ.ಹೆಗಡೆ, ಲಕ್ಷ್ಮಣ ನಾಗ ನಾಯ್ಕ, ವಿನಾಯಕ ಬಂಗಾರ್ಯ ನಾಯ್ಕ, ನಾಗರಾಜ ರಾಮ ನಾಯ್ಕ, ಮಹಾಬಲೇಶ್ವರ ಚೌಡ ನಾಯ್ಕ, ಪರಮೇಶ್ವರ ದ್ಯಾವ ನಾಯ್ಕ, ಚೌಡ ತಮ್ಮಣ್ಣ ಗೌಡ ಇವರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಡೀನ್ ನಾಗೇಶ ನಾಯ್ಕ ಕಾಗಾಲ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್, ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಹಾಗೂ ಸಿಬ್ಬಂದಿಗಳಿದ್ದರು.