Slide
Slide
Slide
previous arrow
next arrow

ಹವ್ಯಕ “ವಿದ್ಯಾರತ್ನ” ಪ್ರಶಸ್ತಿಗೆ ಕೆರೆಕೋಣಿನ ಗುರುಪ್ರಸಾದ್ ಆಯ್ಕೆ

300x250 AD

ಹೊನ್ನಾವರ :’ ಶ್ರೀ ಅಖಿಲ ಹವ್ಯಕ ಮಹಾಸಭೆಯ ತನ್ನ 81 ಸಂವತ್ಸರ ಪೂರೈಸಿದ ಹಿನ್ನಲೆಯಲ್ಲಿ ಕೊಡಬಯಸುವ “ಹವ್ಯಕ ವಿದ್ಯಾರತ್ನ” ಪ್ರಶಸ್ತಿಗೆ ಕೆರೆಕೋಣಿನ ನಡಭಾಗದ ಎನ್.ಎಂ.ಗುರುಪ್ರಸಾದ್ ಆಯ್ಕೆ ಆಗಿದ್ದಾರೆ.

ಇವರು ಎಂಎಸ್ಸಿ ಪರಿಸರ ವಿಜ್ಞಾನ ವಿಭಾಗದಲ್ಲಿ 5 ಚಿನ್ನದ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದರು. ಪ್ರಸ್ತುತ ಪಿಹೆಚ್‌ಡಿ ಅಧ್ಯಯನ ಅಂತಿಮ ಹಂತದಲ್ಲಿದ್ದು, ನೀರಿನ ಗುಣಮಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಮತ್ತು ಶರಾವತಿಯ ಕಪ್ಪೆಚಿಪ್ಪಿನ ಸಂಪನ್ಮೂಲಗಳ ವೈವಿಧ್ಯತೆ ಮತ್ತು ವಿತರಣೆಯ ಮೇಲೆ ಅದರ ಪ್ರಭಾವ” ವಿಷಯದ ಮೇಲೆ ಸಂಶೋಧನೆ ನಡೆಸಿದ್ದಾರೆ. ಅದಲ್ಲದೆ ವನ್ಯಜೀವಿ ಸಂರಕ್ಷಣಾ ಮಂಡಳಿಯಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಹೊನ್ನಾವರ ಫೌಂಡೇಶನ್ ಸಂಸ್ಥೆಯ ಯೋಜನೆಗಳ ಉಸ್ತುವಾರಿಯಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊನ್ನಾವರದ ವೀಳ್ಯದೆಲೆಗೆ “ಪೇಟೆಂಟ್” ಕೊಡಿಸುವಲ್ಲಿ ಪ್ರಯತ್ನ ನಡೆಸುತ್ತಿರುವುದು ಗಮನಾರ್ಹ. ಅಘನಾಶಿನಿ ನದಿ ಉಳಿಸಿ ಹೋರಾಟದಲ್ಲಿ ಸಹ ಭಾಗಿಯಾಗಿದ್ದರು.

300x250 AD

ಪ್ರಸ್ತುತ ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ “ವಿಶ್ವ ಹವ್ಯಕ ” ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Share This
300x250 AD
300x250 AD
300x250 AD
Back to top