ಕಾರವಾರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆಯಡಿಯಲ್ಲಿ ನೀರಾವರಿ ಭತ್ತ, ಮಳೆಯಾಶ್ರಿತ ಹೆಸರು, ಈರುಳ್ಳಿ ಮತ್ತು ಶೇಂಗಾ ಬೆಳೆಗಳನ್ನು ರೈತರು ವಿಮೆಗೆ ಒಳಪಡಿಸಬಹುದು.
ಹಿಂಗಾರು ಹಂಗಾಮಿನ ಶೇಂಗಾ ಬೆಳೆಗೆ ಅಂಕೋಲಾ ತಾಲೂಕಿನಲ್ಲಿ ಬೇಲೆಕೆರೆ, ಬಳಲೆ, ಬಾಸಗೋಡ ಹೋಬಳಿ, ಭಟ್ಕಳ ತಾಲೂಕಿನ ಮಾವಳ್ಳಿ ಹೋಬಳಿ ಹಾಗೂ ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯ ವ್ಯಾಪ್ತಿಗೆ ಮತ್ತು ಭತ್ತ ದ ಬೆಳೆಗೆ ಹೊನ್ನಾವರ ತಾಲೂಕಿನ ಹೊನ್ನಾವರ ಹೋಬಳಿ ಹಾಗೂ ಕುಮಟಾ ತಾಲೂಕಿನ ಕೂಜಳ್ಳಿ ಹೋಬಳಿಯ ವ್ಯಾಪ್ತಿಗೆ ಒಳಪಟ್ಟಿದೆ. ಹೆಸರು ಹಾಗೂ ಹುರುಳಿ ಬೆಳೆಗಳಿಗೆ ಹಳಿಯಾಳ ತಾಲೂಕಿನ ಮುರ್ಕವಾಡ, ಹಳಿಯಾಳ ಹೋಬಳಿ ಹಾಗೂ ಮುಂಡಗೋಡ ತಾಲೂಕಿನ ಮುಂಡಗೋಡ ಹೋಬಳಿ ವ್ಯಾಪ್ತಿಗೆ ಒಳಪಟ್ಟಿವೆ. ಹಿಂಗಾರು ಹಂಗಾಮಿನ ವಿಮಾ ಕಂತನ್ನು ಪಾವತಿಸಲು ಡಿ.31 ಕೊನೆಯ ದಿನವಾಗಿದೆ.
ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮ ಪಂಚಾಯತ ಹಾಗೂ ಮುಂಡಗೋಡ ತಾಲೂಕಿನ ಹುನಗುಂದ, ಇಂದೂರು ಮತ್ತು ಚಿಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿವೆ. ಬೇಸಿಗೆ ಹಂಗಾಮಿನ ವಿಮಾ ಕಂತು ಪಾವತಿಸಲು 28 ಫೆಬ್ರವರಿ 2025 ಕೊನೆಯ ದಿನವಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ವಿಮ ಕಂಪನಿ (AIC LTd/ ಶ್ರೀನಿವಾಸ ಟಿ. ದೂ: Tel:+916366684606, ಬ್ಯಾಂಕುಗಳು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.