ಹೃದಯಪೂರ್ವಕ ಧನ್ಯವಾದಗಳು
ದೊಡ್ಡನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ. ದೊಡ್ಡನೆ ತಾ: ಸಿದ್ದಾಪುರ
ಡಿ. 14ರಂದು ನಡೆದ ಚುನಾವಣೆಯಲ್ಲಿ, ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳಿಗೆ ಕಿವಿಗೊಡದೆ, ಯಾವುದೇ ಆಮಿಷಗಳಿಗೆ ಬೆಲೆ ಕೊಡದೆ ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಮತ್ತೆ ಆಡಳಿತ ಚುಕ್ಕಾಣಿ ನೀಡಿ, ಸಹಕಾರಿ ಸಂಘವನ್ನು ಸದಸ್ಯ ರೈತ ಬಂಧುಗಳಿಗೆ ಮತ್ತಷ್ಟು ಸ್ನೇಹಿಯಾಗಿಸಿ, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಕಾರಣರಾದ ಸಂಘದ ಸರ್ವ ಸದಸ್ಯರುಗಳಿಗೆ ಹೃದಯಪೂರ್ವಕ ಧನ್ಯವಾದಗಳು.
ನಮ್ಮ ತಂಡದ ಚುನಾವಣಾ ಉಸ್ತುವಾರಿ ವಹಿಸಿದ್ದ ಶ್ರೀ ಸಿ.ಡಿ.ಹೆಗಡೆ ದೊಡ್ಡನೆಯವರಿಗೆ, ಚುನಾವಣೆಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿಗಳು, ಚುನಾವಣಾಧಿಕಾರಿಗಳು, ಎಲ್ಲ ಆತ್ಮೀಯ ಮಿತ್ರರು, ಅಭಿಮಾನಿಗಳಿಗೂ ತುಂಬುಮನಸ್ಸಿನ ಕೃತಜ್ಞತೆಗಳು.