Slide
Slide
Slide
previous arrow
next arrow

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ವಿಧಿವಶ

300x250 AD

ಅಂಕೋಲಾ: ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ.

86 ವರ್ಷ ವಯಸ್ಸಿನ ತುಳಸಿ ಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದೊಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.

ಗಂಡನನ್ನು ಕಳೆದುಕೊಂಡ ನಂತರ ತನ್ನಿಬ್ಬರು ಮಕ್ಕಳನ್ನು ಸಾಕುವ ಸಲುವಾಗಿ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಸಂಬಳಕ್ಕೆ ಸೇರಿದ್ದ ತುಳಸಿ ಗೌಡ, ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಹಲವು ಕಾಡು ಗಿಡಗಳ ಬೀಜಗಳನ್ನು ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಹಸಿರು ಕ್ರಾಂತಿ ಮಾಡಿದ್ದರು. ಅಳಿವಿನಂಚಿನಲ್ಲಿರುವ ಅದೆಷ್ಟೋ ಗಿಡಮೂಲಿಕೆಗಳನ್ನು ರಕ್ಷಿಸುವ ಮೂಲಕ ತಮ್ಮ ಸಂಪೂರ್ಣ ಜೀವನವನ್ನೇ ಗಿಡಮರಗಳ ಆರೈಕೆಯಲ್ಲಿ ಮುಡುಪಾಗಿಟ್ಟುಕೊಂಡಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಒಂದು ವರ್ಷಕ್ಕೆ ಸರಿಸುಮಾರು 30000 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರ ಈ ಅಪೂರ್ವ ಸಾಧನೆಗೆ, ಪರಿಸರ ಪ್ರೇಮವನ್ನು ಗಣನೆಗೆ ತೆಗೆದುಕೊಂಡು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

300x250 AD

ಮೃತರು ಮಗ ಸುಬ್ರಾಯ ಮತ್ತು ಮಗಳು ಸೋಮಿ ಹಾಗೂ ನಾಲ್ಕು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.

Share This
300x250 AD
300x250 AD
300x250 AD
Back to top