ಸಿದ್ದಾಪುರ: ತಾಲೂಕಿನ ಇಟಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ ನೇತೃತ್ವದ ತಂಡ ಜಯಗಳಿಸಿದೆ.
ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ, ನಾರಾಯಣಮೂರ್ತಿ ಸೀತಾರಾಮ ಹೆಗಡೆ ಹರಗಿ, ನವೀನ ಭಾಸ್ಕರ ಹೆಗಡೆ ಕಲಗದ್ದೆ, ಅಣ್ಣಪ್ಪ ತಿಮ್ಮ ನಾಯ್ಕ ಕಾನಳ್ಳಿ, ರಾಮಕೃಷ್ಣ ಶ್ರೀಧರ ಹೆಗಡೆ ತೊರ್ಮೆ, ಮಾಲತಿ ಶ್ರೀಧರ ಹೆಗಡೆ ಕೀರ್ತಿಗದ್ದೆ, ಲಲಿತಾ ಮೋಹನದಾಸ ನಾಯ್ಕ ಐಗೋಡ, ಗಂಗಾಧರ ತಿಮ್ಮ ನಾಯ್ಕ ಗುಲ್ಲುಮನೆ, ಸಂತೋಷಕುಮಾರ ಶಂಕರ ಗೌಡರ ದೊಡ್ಡಗದ್ದೆ, ಅಣ್ಣಪ್ಪ ಲಿಂಗ ಹಸ್ಲರ್ ತುರ್ಕುಳಿ, ಶಂಕರ ರಾಮ ಗೌಡ ಕೊಡ್ತಗಣಿ ಇವರು ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿಯಾಗಿ ಮನೋಜ ಉಮೇಶ ನಾಯ್ಕ ಕಾರ್ಯನಿರ್ವಹಿಸಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.