ಕುಮಟಾ: ಚಿಕ್ಕಬಳ್ಳಾಪುರದಲ್ಲಿ ಡಿಸೆಂಬರ್ 12ರಿಂದ ಡಿಸೆಂಬರ್ 14ರವರೆಗೆ ನಡೆದ 27 ನೇ ಚುಂಚಾದ್ರಿ ರಾಜ್ಯಮಟ್ಟದ ಕ್ರೀಡೋತ್ಸವದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿನಿ ಸ್ಪಂದನಾ ನಾಯಕ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಾಲಕರು ಡಾಡ್ಜ್ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ನಾಗರತ್ನಾ ನಾಯಕ್ ರವರನ್ನು, ಚಿಕ್ಕಾಬಳ್ಳಾಪುರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಅವರಿಗೆ ಮಾರ್ಗದರ್ಶನ ನೀಡಿದ ಆಡಳಿತಾಧಿಕಾರಿ ಜಿ. ಮಂಜುನಾಥ, ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್, ವಿವೇಕಾನಂದ ನಾಯ್ಕ, ಗುರುಪಾದ ಗೌಡ, ಕವಿತಾ ಡಿ. ನಾಯ್ಕ, ಮಾನಸಾ ನಾಯ್ಕ ಮತ್ತು ಮಂಜುನಾಥ ಗುನಗರನ್ನು ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಜೀ ಯವರು ಆಶೀರ್ವದಿಸಿದ್ದಾರೆ.