ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯ ಸ್ವರಾ ಲಹರಿ ಫೌಂಡೇಶನ್ ಆಶ್ರಯದಲ್ಲಿ ಡಿ.12 ರಂದು ಸಂಜೆ 6 ಗಂಟೆಗೆ ಹಿತ್ಲಳ್ಳಿ ಸಹಕಾರಿ ಸಂಘದ ಸಭಾಭವನದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿದೆ.
ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ಬಾನ್ಸುರಿ ವಾದನಕ್ಕೆ ಕಿರಣ್ ಗೋಡ್ಕಿಂಡಿ ತಬಲಾ ಸಾಥ್ ನೀಡಲಿದ್ದಾರೆ. ಪಂಡಿತ್ ಧನಂಜಯ್ ದೈತಂಕರ್ ಅವರ ಸಂತೂರ್ ವಾದನಕ್ಕೆ ಸಂತೋಷ್ ಹೆಗಡೆ ತಬಲಾ ಸಾಥ್ ಒದಗಿಸಲಿದ್ದಾರೆ.