ಹೊನ್ನಾವರ: ಪಾಠ ಮತ್ತು ಆಟ ಇದು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ, ಆಟದೊಂದಿಗೆ ಪಾಠ ಬೆರೆತಾಗ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದು ಪಿಎಸ್ಐ ರಾಜಶೇಖರ ವಂದಲ್ಲಿ ಹೇಳಿದರು.
ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಆಟೋಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಇದನ್ನು ಸಮವಾಗಿ ಸ್ವೀಕರಿಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿ ಡಾ. ಲಕ್ಷ್ಮೀಶ ಭಟ್ಟ ಮಾತನಾಡಿ ಕ್ರೀಡೆಯು ಆರೋಗ್ಯವನ್ನು ವೃದ್ಧಿಸುತ್ತದೆ, ಮನುಷ್ಯರನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಮೇಶ ಹೆಗಡೆ ಮಾತನಾಡಿ ಗೆದ್ದಾಗ ಸಂತೋಷವನ್ನು ಪಡಿ, ಸೋತಾಗ ನಿರಾಶರಾಗಬೇಡಿ ಎಂದರು. ಗೌರವಾಧ್ಯಕ್ಷ ವಿ.ಜಿ. ಹೆಗಡೆ ಗುಡ್ಗೆ ಹಾಗೂ ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆ ಮಾತನಾಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ವಿಂದ್ಯಾ ಭಟ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ರೇಷ್ಮಾ ಜೊಗಳೆಕರ್ ಸ್ವಾಗತಿಸಿದರು. ವಿನೋಜ ಡಿಕೋಸ್ಟಾ ವಂದಿಸಿದರು. ಸೌಮ್ಯ ಹೆಗಡೆ ಹಾಗೂ ಅಂಜನಾ ಶೆಟ್ಟಿ ನಿರೂಪಿಸಿದರು. ಶಿಕ್ಷಕ ಶಂಕರ ಶಿಂಗೆ ಪ್ರಮಾಣ ವಚನವನ್ನು ಬೋಧಿಸಿದರು.