ಶಿರಸಿ: ಇಲ್ಲಿನ ಲಯನ್ಸ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕು.ಖುಷಿ ಸಾಲೇರ 63ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಡಿ.5ರಿಂದ 15ರವರೆಗೆ ಕೋಯಿಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ಗುಂಪಿನಲ್ಲಿ ಈಕೆ ಕರ್ನಾಟಕ ತಂಡದಲ್ಲಿದ್ದು, ತರಬೇತುದಾರರಾದ ದಿಲೀಪ ಹಣಬರ ಹಾಗೂ ಸಹಾಯಕ ತರಬೇತುದಾರರರಾದ ಮಂಜಪ್ಪ ನಾಯ್ಕ ಇವರ ತರಬೇತಿ ಮೂಲಕ ಈ ಸಾಧನೆ ತೋರಿದ್ದಾಳೆ. ಸಾಧನೆ ತೋರಿದ ವಿದ್ಯಾರ್ಥಿನಿಗೆ, ಅವರ ಪಾಲಕರಿಗೆ ಹಾಗೂ ತರಬೇತುದಾರರಿಗೆ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲಾ ಹಾಗೂ ಕಾಲೇಜು ಸಮೂಹದ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ, ಪಾಲಕ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದೆ.