Slide
Slide
Slide
previous arrow
next arrow

ಹಳಿಯಾಳದಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

300x250 AD

ಹಳಿಯಾಳ : ತಹಶೀಲ್ದಾರ್ ಕಾರ್ಯಾಲಯದಲ್ಲಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲೂಕಿಗೆ ಸಂಬಂಧಿಸಿದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯು ಬುಧವಾರ ಜರುಗಿತು.

ಸಭೆಯಲ್ಲಿ ಹಳಿಯಾಳ ಹಾಗೂ ಜೋಯಿಡಾ ತಾಲೂಕಿಗೆ ಸಂಬಂಧಿಸಿದ ನಮೂನೆ 57 ರಲ್ಲಿ ಸ್ವೀಕೃತಗೊಂಡಿರುವ ಅರ್ಜಿಗಳ ಪರಿಶೀಲನೆ ಕುರಿತು ಚರ್ಚಿಸಲಾಯಿತು.

300x250 AD

ಸಭೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸದಸ್ಯರುಗಳಾದ ಸುಭಾಷ್ ಕೋರ್ವೇಕರ, ಪರಶುರಾಮ ಎಚ್.ಬಿ. ಮತ್ತು ಜೂಲಿಯಾನ ಪರ್ನಾಂಡಿಸ್, ಹಳಿಯಾಳ ತಹಶೀಲ್ದಾರ್ ಪ್ರವೀಣ್ ಕುಮಾರ್ ಹುಚ್ಚಣ್ಣನವರ, ಜೋಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಹಾಗೂ ಎರಡು ತಾಲೂಕಿನ ಕಂದಾಯ ನಿರೀಕ್ಷಕರು‌ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top