Slide
Slide
Slide
previous arrow
next arrow

ದೊಡ್ಮನೆ ಅಧ್ಯಕ್ಷ, ನಿರ್ದೇಶಕರ ಅನರ್ಹತೆಗೆ ತಡೆಯಾಜ್ಞೆ! ಗಡಿಹಿತ್ಲು ತುಸು ನಿರಾಳ

300x250 AD

ಸಿದ್ದಾಪುರ : ತಾಲೂಕಿನ ದೊಡ್ಮನೆ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ಕರ್ಕಿಮಕ್ಕಿ ಇದರ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಗಡಿಹಿತ್ಲು ಹಾಗು ಸಂಸ್ಥೆ ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಗಡಿಹಿತ್ಲು ಇವರ ಅನರ್ಹತೆ ಆದೇಶವನ್ನು ತಡೆ ಹಿಡಿದು, ಸಹಕಾರ ಸಂಘಗಳ ಉಪನಿಬಂಧಕರು ಆದೇಶವನ್ನು ಹೊರಡಿಸಿದ್ದಾರೆ. ಆ ಮೂಲಕ ಅಧ್ಯಕ್ಷ ಹಾಗು ನಿರ್ದೇಶಕರ ಅನರ್ಹತೆ ಪ್ರಕರಣಕ್ಕೆ ತಡೆ ಬಿದ್ದಿದೆ.

ಸಹಕಾರ ಸಂಘಗಳ ಕಾಯ್ದೆಯನ್ವಯ 29ಸಿ ಅಡಿಯಲ್ಲಿ ಕೇವಲ ಒಬ್ಬ ನಿರ್ದೇಶಕರ ಮೇಲೆ ಪ್ರಕರಣ ದಾಖಲಿಸಿದ್ದು, ಸಾಮೂಹಿಕ‌ ಆಡಳಿತ ಮಂಡಳಿಯಿಂದ ಲೋಪವಾಗಿರುವುದಕ್ಕೆ, ಓರ್ವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲು ಬರುವುದಿಲ್ಲ. ಆದ ಕಾರಣ ಮುಂದಿನ ಆದೇಶದ ವರೆಗೆ ಸಹಾಯಕ ನಿಬಂಧಕರು, ಶಿರಸಿ ಇವರ ಆದೇಶವನ್ನು ತಡೆ ಹಿಡಿದು, ಕಾರವಾರದ ಡಿ.ಆರ್. ಕೋರ್ಟ್ ಆದೇಶ ನೀಡಿದೆ. ಮತ್ತು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.31 ಕ್ಕೆ ನಿಗಧಿಪಡಿಸಿ ಆದೇಶ ಮಾಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top