Slide
Slide
Slide
previous arrow
next arrow

‘ಗುನ್ನೆ ಪ್ರಕರಣದ ಕಟ್ಟಿಗೆಗಳನ್ನು ಸ್ಥಳೀಯರಿಗೆ ಮನೆ ಕಟ್ಟಲು ಒದಗಿಸಿ’

300x250 AD

ದಾಂಡೇಲಿ: ಜಗತ್ಪ್ರಸಿದ್ಧ ಸಾಗುವಾನಿ, ಸೀಸಂ ಸೇರಿದಂತೆ ಇನ್ನಿತರೆ ಕಟ್ಟಿಗೆಗಳಿಗೆ ಹೆಸರುವಾಸಿಯಾದ ದಾಂಡೇಲಿ ನಗರದಲ್ಲಿ ಮರಮುಟ್ಟು ಸಂಗ್ರಹಾಲಯದಿಂದ ವಿವಿಧ ನಾಟಾಗಳ ಇ ಹರಾಜು (ಆನ್ಲೈನ್ ಮೂಲಕ) ಪ್ರಕ್ರಿಯೆ ನ:27 ರಿಂದ ಮೂರು ದಿನಗಳವರೆಗೆ ನಡೆಯಲಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಗುನ್ನೆ ಪ್ರಕರಣಗಳ ಕಟ್ಟಿಗೆ ದಾಸ್ತಾನುಗಳನ್ನು ಸೇರಿಸಬಾರದು ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮಸನ್ ಮನವಿ ಮಾಡಿದ್ದಾರೆ.

ಅವರು ಈ ಬಗ್ಗೆ ಮಂಗಳವಾರ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ದಾಂಡೇಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಅರಣ್ಯವಾಸಿಗಳು ಹಾಗೂ ಅರಣ್ಯದಂಚಿನಲ್ಲಿರುವ ಸ್ಥಳೀಯ ಜನರು ಮನೆ ಕಟ್ಟಿಕೊಳ್ಳಲು ಈಗ ದುಬಾರಿ ಹಣ ತೆತ್ತು ಕಟ್ಟಿಗೆ ಖರೀದಿಸಬೇಕಾದ ಸ್ಥಿತಿಯಿದೆ. ಸ್ಥಳೀಯರಿಗೂ ಮನೆ ನಿರ್ಮಿಸಿಕೊಳ್ಳಲು ರಿಯಾಯತಿ ದರದಲ್ಲಿ ಕಟ್ಟಿಗೆಗಳು ದೊರೆಯಬೇಕಾದ ಅಗತ್ಯ ಬಹಳ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗುನ್ನೆ ಪ್ರಕರಣದ ಕಟ್ಟಿಗೆಗಳನ್ನು ಆನ್ಲೈನ್ ಹರಾಜು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಟ್ಟು, ದಾಂಡೇಲಿ ಸೇರಿದಂತೆ ಸ್ಥಳೀಯವಾಗಿ ಮನೆ ಕಟ್ಟುವವರಿಗಾಗಿಯೇ ಪ್ರತ್ಯೇಕ ಟೆಂಡರ್ ಕರೆಯುವ ವ್ಯವಸ್ಥೆಯಾಗಬೇಕು ಹಾಗೂ ರಿಯಾಯತಿ ದರದಲ್ಲಿ ಈ ಗುನ್ನೆ ಪ್ರಕರಣಗಳ ಕಟ್ಟಿಗೆಯನ್ನು ಒದಗಿಸುವಂತಾಗಬೇಕು ಎಂದು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top