Slide
Slide
Slide
previous arrow
next arrow

ಸಂಘ, ಸದಸ್ಯರ ನಡುವಿನ ಭಾವನಾತ್ಮಕ ಸಂಬಂಧವೇ ಸಂಘದ ಉನ್ನತಿಗೆ ಕಾರಣ: ಕಾಗೇರಿ

300x250 AD

ಸಿದ್ದಾಪುರ: ಇಂದು‌ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲವಾಗಿವೆ, ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿವೆಯೆಂದರೆ ಸಂಘ ಹಾಗೂ ಸದಸ್ಯರ ಕುಟುಂಬದ ಜೊತೆಗಿನ ಭಾವನಾತ್ಮಕ ಸಂಬಂಧವೇ ಕಾರಣವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ ಸಭಾಭವನ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಸ್ಥೆ ಕುಟುಂಬದ ಒಂದು ಭಾಗದಂತಾಗಿದೆ. ಅಡಕೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ರೈತರು ಸಮರ್ಥವಾಗಿ ಎದುರಿಸಿ, ಕಷ್ಟದಿಂದ ಹೊರಬರಬೇಕಾಗಿದೆ. ಹೊರದೇಶಗಳಿಂದ ಬರುವ ಅಡಿಕೆಗಳಿಂದ ರೈತರು ಆಘಾತಕ್ಕೊಳಗಾಗಿದ್ದಾರೆ. ಇದಕ್ಕೆ ಸೂಕ್ತ ಕ್ರಮ ಕೈಗೊಂಡು ರೈತರನ್ನು ಕಾಪಾಡಲು ಕೇಂದ್ರ ಸರ್ಕಾರ ಜವಾಬ್ದಾರಿಯುತ ಮತ್ತು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಅರಣ್ಯ ಅತಿಕ್ರಮಣ, ಕಸ್ತೂರಿರಂಗನ್ ವರದಿಯಿಂದ ಯಾವುದೇ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮಕೈಗೊಂಡು ಈಗಿರುವ ಸ್ಥಿತಿಗಿಂತಲೂ ಉತ್ತಮವಾಗಿ ಜೀವನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನತೆಯೊಂದಿಗಿರುತ್ತದೆ ಎಂದು ಭರವಸೆ ನೀಡಿದರು.

ಶಾಸಕ ಭೀಮಣ್ಣ ನಾಯ್ಕ್ ಸಂಘದ ಸೂಪರ್ ಮಾರ್ಕೆಟ್ ಉದ್ಘಾಟಿಸಿ ಮಾತನಾಡಿ, ಸಂಘದೊಂದಿಗೆ ನಿರಂತರ ತಮ್ಮ ವ್ಯವಹಾರಗಳನ್ನು ನಡೆಸಿ ಸಂಘದ ಅಭಿವೃದ್ಧಿಯಲ್ಲಿಯೂ ಕಾರಣರಾಗಿ, ತಾವು ಬೆಳೆದ ಬೆಳೆಗಳನ್ನು ಸಹಕಾರಿ ಸಂಘದ ಮೂಲಕ ಮಾರಾಟ ಮಾಡುವುದರ ಮೂಲಕ ತಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಸಂಘದ ವ್ಯವಹಾರದಲ್ಲಿ ರಾಜಕೀಯ ಪ್ರವೇಶ ಇರಬಾರದು. ಸಂಘದ ಸ್ಥಾಪನೆಯ ಧ್ಯೇಯೋದ್ದೇಶ ಈಡೇರುವಂತೆ ಸಂಘದ ಜೊತೆ ವ್ಯವಹರಿಸಿ ಎಂದು ಸದಸ್ಯರಿಗೆ ಕರೆ ನೀಡಿದರು.

300x250 AD

ಇದೇ ವೇಳೆ ಜಿಲ್ಲೆಯ ಸಮಸ್ಯೆಯಾದ ಅರಣ್ಯ ಅತಿಕ್ರಮಣ, ಕಸ್ತೂರಿರಂಗನ್ ವರದಿ, ಎಲೆ ಚುಕ್ಕಿ ಹಾಗೂ ಬೆಟ್ಟ ಸಮಸ್ಯೆಗಳನ್ನು ಸದನದಲ್ಲಿ ಮುನ್ನೆಲೆಗೆ ತಂದು ರೈತರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳುವುದಕ್ಕೆ ಸಂಸದ ಕಾಗೇರಿಯವರಲ್ಲಿ ಮನವಿ ಮಾಡಿದರು.

ಸಂಘದ ಅಧ್ಯಕ್ಷ ಎಂ.ಐ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಪ್ರಮುಖರಾದ ಆರ್.ಎಸ್.ಹೆಗಡೆ ವಾಜಗೋಡ,ಎನ್.ಡಿ.ನಾಯ್ಕ, ಗ್ರಾಪಂ ಅಧ್ಯಕ್ಷೆ ಸರಸ್ವತಿ ಗೌಡ, ಉಪಾಧ್ಯಕ್ಷ ಎಸ್.ಎಂ.ಭಟ್ಟ ಸಂಘದ ಉಪಾಧ್ಯಕ್ಷ ಜಿ.ಜಿ.ಭಟ್ಟ, ಕೆ.ಜಿ.ನಾಗರಾಜ, ಸಂಘದ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.
ನಿರ್ದೇಶಕ ಎಂ.ಎನ್.ಹೆಗಡೆ, ಶಿಕ್ಷಕಿ ವಿನೋದಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು, ಮುಖ್ಯಕಾರ್ಯನಿರ್ವಾಹಕ ಬಾಲಚಂದ್ರ ಭಟ್ಟ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top