ಬಿಜೆಪಿ ರೈತಮೋರ್ಚಾ ಅಂಕೋಲಾ ಮನವಿ
ಅಂಕೋಲಾ: ಬಿಜೆಪಿ ಉತ್ತರ ಕನ್ನಡ ಜಿಲ್ಲಾ ರೈತ ಮೊರ್ಚಾ ಹಾಗೂ ಅಂಕೋಲಾ ಮಂಡಲದ ವತಿಯಿಂದ ಶಿರೂರು ಗುಡ್ಡ ಕುಸಿತದಿಂದ ನದಿಯಲ್ಲಿ ಕೃತಕ ಗುಡ್ಡ ನಿರ್ಮಾಣವಾಗಿದ್ದನ್ನು ತೆರವುಗೊಳಿಸುವಂತೆ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವಕರ ಮಾತನಾಡಿ ಶಿರೂರಿನ ಗುಡ್ಡ ಕುಸಿತದಿಂದ ನದಿಯ ಮಧ್ಯದಲ್ಲಿ ಕೃತಕ ಗುಡ್ಡ ನಿರ್ಮಾಣವಾಗಿರುತ್ತದೆ. ಇದರಿಂದ ಹಿಂದಿರುವ ಹಲವಾರು ಗ್ರಾಮಗಳಿಗೆ ನೆರೆಯ ಬೀತಿ ಎದುರಾಗಿದೆ. 2019 ಹಾಗೂ 2021 ರ ಪ್ರವಾಹ ಬಂದಾಗ ತಾಲೂಕಿನ ಸಗಡಗೇರಿ, ಮೊಗಟಾ,ವಾಸರಕುದ್ರಗೆ ಅಗಸೂರು, ಸುಂಕಸಾಳ, ಡೋಂಗ್ರಿ, ಪಂಚಾಯತ್ ನ ಹಲವಾರು ಗ್ರಾಮಗಳ ತೋಟಗಳು ಗದ್ದೆಗಳು ರೈತರ ಮನೆಗಳು ಮುಳುಗಡೆಯಾಗಿದ್ದವು. ಆದರೆ ಈಗ ಸಣ್ಣ ಸಣ್ಣ ಮಳೆಗೂ ಪ್ರಭಾವ ಎದುರಾಗುವ ಬೀತಿ ನಿರ್ಮಾಣವಾಗಿದೆ.
ಗುಡ್ಡದ ಮಣ್ಣನ್ನು ನದಿಯಿಂದ ತೆರೆವುಗೊಳಿಸದೆ ಹೋದಲ್ಲಿ ಸಾವಿರಾರು ಹೆಕ್ಟರ್ ಭತ್ತದ ಗದ್ದೆಗಳು ನಾಶವಾಗುವ ಸಂಭವವಿದೆ. ಇಂದಿನ ದಿನಗಳಲ್ಲಿ ಪ್ರತಿ ಮಳೆಯಲ್ಲು ರೈತರಿಗೂ ಪ್ರವಾಹದ ಬೀತಿ ಇರುತ್ತದೆ.ಈಗಾಗಲೇ ನೇರೆ ಬೀತಿಯಿಂದ ಗದ್ದೆಗಳು ಪಾಳು ಬಿದ್ದಿವೆ. ನದಿಯಲ್ಲಿರುವ ಗುಡ್ಡದ ಮಣ್ಣನ್ನು ಕೂಡಲೇ ತೆರವು ಗೊಳಿಸುವ ಕಾರ್ಯ ಸಂಬಂಧಪಟ್ಟ ಇಲಾಖೆ ಮೂಲಕ ಮಾಡಿಸುವಂತೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಅಂಕೋಲಾ ಮಂಡಲ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ, ರಾಮಚಂದ್ರ ಹೆಗಡೆ ಮಾತನಾಡಿದರು.ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್.ಭಟ್ಟ್ , ಅಂಕೋಲಾ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ಆರತಿ ಗೌಡ, ಬಿಜೆಪಿ ಪ್ರಮುಖರಾದ ಭಾಸ್ಕರ ನಾರ್ವೆಕರ್, ದಾಮು ರಾಯ್ಕರ್, ಎಮ್. ಎನ್.ಭಟ್ಟ್, ನಾರಾಯಣ ಹೆಗಡೆ, ಮಹೇಶ ನಾಯಕ, ಸದಾನಂದ ನಾಯಕ, ಈಶ್ವರ ಗೌಡ, ಪ್ರವೀಣ ನಾಯ್ಕ, ಸಂದೀಪ ಗಾಂವಕರ್, ಈಶ್ವರ ನಾಯ್ಕ, ನಾಗೇಶ ಸಿದ್ಧಿ, ಮಹೇಶ ನಾಯ್ಕ, ಮನೋಹರ್ ನಾಯ್ಕ, ಗಣಪತಿ ನಾಯ್ಕ, ನಾಗೇಶ ಕಿಣಿ,ಬಿಂದೇಶ ನಾಯಕ, ರಾಘವೇಂದ್ರ ನಾಯ್ಕ, ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.