Slide
Slide
Slide
previous arrow
next arrow

ಬಿಜೆಪಿ ಉತ್ತರಕನ್ನಡ ಜಿಲ್ಲಾ ಸಕ್ರಿಯ ಸದಸ್ಯತಾ ಕಾರ್ಯಾಗಾರ

300x250 AD

ಶಿರಸಿ: ನಗರದ ಪಂಡಿತ ದೀನದಯಾಳ ಭವನದಲ್ಲಿ ಬಿಜೆಪಿ ಉತ್ತರಕನ್ನಡ ಜಿಲ್ಲೆಯ ಸಕ್ರಿಯ ಸದಸ್ಯತಾ ಕಾರ್ಯಾಗಾರ ನಡೆಯಿತು. ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸದಸ್ಯತಾ ಅಭಿಯಾನ ಚೆನ್ನಾಗಿ ನಡೆಯುತ್ತಿದೆ. ರಾಜ್ಯದ ಸೂಚನೆಯಂತೆ ಪ್ರತೀ ಮತಗಟ್ಟೆಯಲ್ಲಿಯೂ 2-3 ಸಕ್ರಿಯ ಕಾರ್ಯಕರ್ತರು ಆಗಬೇಕು ಎಂದರು. ಜಿಲ್ಲೆಯ 14 ಮಂಡಲಗಳ ಅಧ್ಯಕ್ಷರು ಹಾಗೂ ಬೂತ್‌ವರೆಗಿನ ನಮ್ಮ ಎಲ್ಲಾ ಹಂತದ ತಂಡ ಒಟ್ಟಾಗಿ ಸದಸ್ಯತಾ ಅಭಿಯಾನದಲ್ಲಿ ತೊಡಗಿಕೊಳ್ಳಬೇಕು ಎಂದರು. ಸಂಘಟನಾತ್ಮಕವಾಗಿ ಹಾಗೂ ರಾಜಕೀಯವಾಗಿ ಪಕ್ಷ ಬಲಪಡಿಸಲು ಅಭಿಯಾನ ಇನ್ನಷ್ಟು ವೇಗ ಪಡೆಯಬೇಕಿದೆ ಎಂದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಹಳಿಯಾಳದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಇನ್ನಷ್ಟು ಉತ್ಸಾಹದಿಂದ ಎಲ್ಲಾ ಮಂಡಲಗಳಲ್ಲಿ ಅಭಿಯಾನ ನಡೆಸೋಣ ಎಂದರು. ಎಲ್ಲಾ ಮಂಡಲಗಳು ಕೂಡ ತಮ್ಮ ಗುರಿ ತಲುಪಲು ಶ್ರಮ ಹಾಕಿ ಪ್ರಯತ್ನಿಸಬೇಕು ಎಂದರು.

ಸಕ್ರಿಯ ಸದಸ್ಯರ ಪರಿಶೀಲನೆಗೆ ಜಿಲ್ಲೆಯಿಂದ ಸಂಚಾಲಕರಾಗಿ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷರಾದ ಗೋವಿಂದ ನಾಯ್ಕ ಅವರನ್ನು ಮತ್ತು 14 ಮಂಡಲಗಳಲ್ಲಿ ಸಕ್ರಿಯ ಸದಸ್ಯರ ಪರಿಶೀಲನೆಗೆ ತಂಡವನ್ನು ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ ಕರ್ಕಿ ಅವರು ಘೋಷಿಸಿದರು.

300x250 AD

ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕರಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ ಕರ್ಕಿ ಅವರು ಮಾತನಾಡಿ ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರ ಮುತುವರ್ಜಿ; ಜಿಲ್ಲೆಯ ಹಾಗೂ ಮಂಡಲದ ಎಲ್ಲಾ ಕಾರ್ಯಕರ್ತರ ಶ್ರಮದಿಂದ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಈ ತಿಂಗಳು ಪೂರ್ತಿ ನಾವೆಲ್ಲರೂ ಅಭಿಯಾನದಲ್ಲಿ ತೊಡಗಿಕೊಂಡು, ಪ್ರತಿ ಮನೆಯನ್ನೂ ತಲುಪಿ ಅತಿಹೆಚ್ಚು ಸದಸ್ಯರ ನೋಂದಣಿ ಮಾಡೋಣ ಎಂದರು. ಪ್ರತಿ ಮತಗಟ್ಟೆಯಲ್ಲಿ ಈ ರೀತಿ ಅಭಿಯಾನದಲ್ಲಿ ಭಾಗವಹಿಸಿ ಸದಸ್ಯರನ್ನು ನೋಂದಣಿ ಮಾಡುವ ಕಾರ್ಯಕರ್ತರನ್ನು, ಸಕ್ರಿಯ ಕಾರ್ಯಕರ್ತ ಎಂದು ಗುರುತಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಇಂದಿನಿಂದ ಆರಂಭವಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಸ್ವಾಗತಿಸಿದರು, ಪ್ರಶಾಂತ ನಾಯ್ಕ ನಿರ್ವಹಿಸಿದರು. ಎಸ್.ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸಂತೋಷ ತಳವಾರ, ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ಆರ್.ಡಿ ಹೆಗಡೆ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಮಂಡಲಗಳಿಂದ ಆಗಮಿಸಿದ್ದ ಸುಮಾರು 80ಕ್ಕೂ ಅಧಿಕ ಅಪೇಕ್ಷಿತ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದರು.

Share This
300x250 AD
300x250 AD
300x250 AD
Back to top