Slide
Slide
Slide
previous arrow
next arrow

ರಾಮನಗುಳಿಯಲ್ಲಿ ಯಶಸ್ವಿಯಾಗಿ ನಡೆದ ವನ್ಯಜೀವಿ ಸಪ್ತಾಹ

300x250 AD

ರಸ್ತೆ‌ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ಅರ್ಥಪೂರ್ಣ ಆಚರಣೆಗೈದ ಅರಣ್ಯ ಇಲಾಖೆ

ಅಂಕೋಲಾ: ವನ್ಯ ಜೀವಿ ಸಪ್ತಾಹ – 2024ರ ಅಂಗವಾಗಿ ರಾಮನಗುಳಿ ವಲಯದ ಕೊಡ್ಲಗದ್ದೆಯಲ್ಲಿ ಗ್ರಾಮ ಅರಣ್ಯ ಸಮಿತಿಯವರು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಊರ ನಾಗರಿಕರು ಮತ್ತು ವಲಯದ ಎಲ್ಲ ಸಿಬ್ಬಂದಿಗಳು ವಲಯ ಅರಣ್ಯಧಿಕಾರಿ ಸುರೇಶ ನಾಯ್ಕ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ NH-63 ಬದಿಯಲ್ಲಿ ವನ್ಯ ಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ವನ್ಯಜೀವಿ ಸಪ್ತಾಹದ “ಪ್ರತಿಜ್ಞಾ ವಿಧಿ” ಸ್ವೀಕರಿಸಿ ನಂತರ ಜಾಥಾ ಮಾಡಿದರು.

ಬಳಿಕ (Biomagnification) ಬಯೋಮಾಗ್ನಿಫಿಕೇಶನ್ ಬಗ್ಗೆ ಅರಿವು ಮೂಡಿಸಿ, ಪ್ರವಾಸಿಕರು, ವಾಹನ ಸವಾರರು ರಸ್ತೆ ಬದಿಯಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುತ್ತ ಕೊಡ್ಲಗದ್ದೆ ಕ್ರಾಸ್ ನಿಂದ ಹೊಸಕೊಪ್ಪಾ ಅರಣ್ಯ ರಕ್ಷಣಾ ಶಿಬಿರದವರೆಗು 2 ಕಿ.ಮೀ ಗಳ ರಸ್ತೆ ಎರಡು ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಮೂಲಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಹಜರತ್ ಅಲಿ ಕುಂದಗೋಳ, ಬಸವರಾಜ್ ಜಂಬಗಿ, ಶಿವಾನಂದ ಮಾಳಿ, ಅರಣ್ಯ ಗಸ್ತುಪಾಲಕ ವಿಠ್ಠಲ್, ಸೋಮನಾಥ, ನಿಂಗಣ್ಣ, ಸತೀಶ ಹಾಗೂ ಸಿಬ್ಬಂದಿಗಳು, ವಿಪತ್ತು‌ ನಿರ್ವಹಣಾ ಘಟಕ, ಊರನಾಗರಿಕರು ಇದ್ದರು.

300x250 AD

Share This
300x250 AD
300x250 AD
300x250 AD
Back to top