Slide
Slide
Slide
previous arrow
next arrow

ಶೇವ್ಕಾರ, ಕೈಗಡಿ ರಸ್ತೆ ಕುಸಿತ: ವಾಹನ ಸಂಚಾರ ನಿಷ್ಕ್ರಿಯ

300x250 AD

ಅಂಕೋಲಾ: ತಾಲೂಕಿನ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಡೋಂಗ್ರಿ ಗ್ರಾ‌.ಪಂ ವ್ಯಾಪ್ತಿಯ ಶೇವ್ಕಾರ, ಡೋಂಗ್ರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯ ಮೋರಿಯ ಎರಡು ಬದಿ ಕುಸಿದಿದ್ದು ವಾಹನ ಸಂಚಾರ ನಿಷ್ಕ್ರಿಯಗೊಂಡಿದೆ.

ಕಳೆದ ಕೆಲವು ತಿಂಗಳ ಹಿಂದೆ ರಸ್ತೆಯ ಒಂದು ಬದಿ ಮಾತ್ರ ಕುಸಿದಿತ್ತು, ಇದೀಗ ಮಂಗಳವಾರ ರಾತ್ರಿ ಸುರಿದ‌‌ ಮಳೆಗೆ ಎರಡು ಬದಿ ಕುಸಿತ ಕಂಡಿದ್ದು ಬೈಕ್ ಹೊರತಾಗಿ ಯಾವುದೇ ವಾಹನ ಸಂಚಾರ‌ ನಡೆಸದಿರುವಂತಾಗಿದೆ. ಶೇವ್ಕಾರ, ಕೈಗಡಿ ಭಾಗದಲ್ಲಿ ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಹೊರ ಜಗತ್ತಿಗೆ ಸಂಪರ್ಕಿಸಲು ಇರಲು ಇದೊಂದೇ ಸೇತುವೆಯಾಗಿದೆ. ಸೇತುವೆ ಸಂಪೂರ್ಣ ಕುಸಿಯುವ ಹಂತದಲ್ಲಿದ್ದು ಒಂದು ವೇಳೆ ಕುಸಿದದ್ದೇ ಆದಲ್ಲಿ ಕೈಗಡಿ, ಶೇವ್ಕಾರ ನಡುಗಡ್ಡೆ (ದ್ವೀಪ) ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.‌ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ ಸದಸ್ಯೆ ಪ್ರೇಮಾ ಹೆಬ್ಬಾರ್ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top