ಅಂಕೋಲಾ: ನರೇಂದ್ರ ಮೋದಿಜಿಯವರ ಜನ್ಮದಿನಾಚರಣೆಯ ಸೇವಾ ಪಾಕ್ಷಿಕದ ಪ್ರಯುಕ್ತ ಭಾರತೀಯ ಜನತಾ ಪಕ್ಷ ಅಂಕೋಲಾ ಮಂಡಲ, ಯುವಮೋರ್ಚಾ, ಅಗಸೂರು ಮಹಾಶಕ್ತಿ ಕೇಂದ್ರ, ಡೋಂಗ್ರಿ ಶಕ್ತಿ ಕೇಂದ್ರ, ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರ ಹುಬ್ಬಳ್ಳಿ ಇವರ ಆಶ್ರಯದಲ್ಲಿ ಕಲ್ಲೇಶ್ವರದ ಗೋಪಾಲಕೃಷ್ಣ ಶ್ರೀದೇವಿ ದೇವಸ್ಥಾನ ಆಡಳಿತ ಮಂಡಳಿ, ಗೋಪಾಲಕೃಷ್ಣ ಯುವಕ ಮಂಡಳ, ಶಾರದಾಂಬಾ ಯುವತಿ ಮಂಡಳ,ಸ್ಥಳಿಯ ಸಂಘ ಸಂಸ್ಥಗಳ ಸಹಕಾರದಲ್ಲಿ ಕಲ್ಲೇಶ್ವರದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಕ್ತದಾನ, ಜೀವದಾನ ಇದೊಂದು ಪುಣ್ಯದ ಕೆಲಸ. ಸೇವಾ ಪಾಕ್ಷಿಕದ ಪ್ರಯುಕ್ತ ಅಂಕೋಲಾ ಮಂಡಳದವರು ಇದನ್ನು ಉತ್ತಮವಾಗಿ ಸಂಘಟಿಸಿದ್ದಾರೆ. ಇದರೊಟ್ಟಿಗೆ ಸದಸ್ಯತ್ವ ಅಭಿಯಾನಕ್ಕೆ ವೇಗವನ್ನು ನೀಡಬೇಕು ಎಂದು ಹೇಳಿದರು.
ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ ರಕ್ತದಾನ ಶಿಬಿರ ಹಾಗೂ ಸದಸ್ಯತ್ವ ಅಭಿಯಾನದ ಬಗ್ಗೆ ತಿಳಿಸಿದರು. ಜಿಲ್ಲಾ ವಿಶೇಷ ಆಮಂತ್ರಿತರಾದ ಸಂಜಯ್ ನಾಯ್ಕ, ಯುವಮೋರ್ಚಾ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಕೋಷ್ಟಗಳ ಸಹ ಸಂಯೋಜಕ ರಾಘವೇಂದ್ರ ಭಟ್ಟ, ಗ್ರಾ ಪಂ ಅಧ್ಯಕ್ಷ ವಿನೋದ ಭಟ್ಟ, ಯುವಮೋರ್ಚಾ ಅಂಕೋಲಾ ಮಂಡಲ ಅಧ್ಯಕ್ಷ ನಿಲೇಶ್ ನಾಯ್ಕ, ಅಗಸೂರು ಮಹಾಶಕ್ತಿ ಕೇಂದ್ರದ ನಾರಾಯಣ ಹೆಗಡೆ ಸ್ವಾಗತಿಸಿದರು, ಶಕ್ತಿ ಕೇಂದ್ರದ ಪ್ರಮುಖ ಸುಧಾಕರ ಭಟ್ಟ ಮತ್ತು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ ಹಳವಳ್ಳಿ ನಿರ್ವಹಿಸಿದರು, ರೈತ ಮೋರ್ಚಾ ಕಾರ್ಯದರ್ಶಿ ವಿ ಎಸ್ ಭಟ್ಟ ವಂದಿಸಿದರು. 52 ಜನ ರಕ್ತದಾನಿಗಳು ಈ ಶಿಬಿರದ ಯಶಸ್ವಿಗೆ ಪಾಲುದಾರರಾದರು. ರಾಷ್ಟೋತ್ಥಾನ ರಕ್ತ ಕೇಂದ್ರದ ಶ್ರೀಧರ ಹಳ್ಯಾಳ ಹಾಗೂ ತಂಡದವರು ಉತ್ತಮವಾಗಿ ಕಾರ್ಯನಿರ್ವಹಿಸಿದರು.