Slide
Slide
Slide
previous arrow
next arrow

ಇಂದು‌ ಮತ್ತು ನಾಳೆ ವೈದ್ಯಕೀಯ ಶೈಕ್ಷಣಿಕ ಸಮ್ಮೇಳನ

300x250 AD

ಶಿರಸಿ: KOA-ICL, Karnataka Orthopaedic Association – Instructional course lecture 2024, ವೈದ್ಯಕೀಯ ಶೈಕ್ಷಣಿಕ ಸಮ್ಮೇಳನವು ಇಂದು (ಸೆ.21) ಶನಿವಾರ ಹಾಗೂ ಸೆ.22, ರವಿವಾರದಂದು ನಗರದ ಸುಪ್ರಿಯಾ ಇಂಟರ್ನ್ಯಾಷನಲ್ ಹೊಟೆಲ್‌ನಲ್ಲಿ ನಡೆಯಲಿದೆ.

ಇದು ರಾಜ್ಯ ಮಟ್ಟದ ಸಮಾವೇಶವಾಗಿದ್ದು, ಕರ್ನಾಟಕ ರಾಜ್ಯ ಎಲುಬು ಮತ್ತು ಕೀಲು ತಜ್ಞರ ಸಂಘದಿಂದ ಪ್ರಾಯೋಜಿಸಲ್ಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಎಲುಬು, ಕೀಲು ತಜ್ಞರ ಸಂಘದಿಂದ ಇದೇ ಮೊದಲ ಬಾರಿಗೆ ಸಮಾವೇಶ ಶಿರಸಿಯಲ್ಲಿ ನಡೆಯುತ್ತಿದ್ದು, ಸುಮಾರು 200 ರಿಂದ 250 ವೈದ್ಯರು ರಾಜ್ಯದ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಮೊಣಕಾಲು ಹಾಗೂ ತೊಡೆ ಸಂದಿಯ ಕೀಲಿನ ತೊಂದರೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ. ಇದು 2 ದಿನದ ಸಮಾವೇಶವಾಗಿದ್ದು, ಇದು ಮುಖ್ಯವಾಗಿ ಎಲುಬು, ಕೀಲು ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪಡೆಯಲು, ಅವರು ವಿಭಾಗಕ್ಕೆ ಸಂಬಂಧಪಟ್ಟಂತೆ ವಿವಿಧ ವ್ಯಾಧಿಗಳನ್ನು ಅಧ್ಯಯನ ಮಾಡಿ, ಅದನ್ನು ಮಂಡನೆ ಮಾಡಬೇಕಾಗುತ್ತದೆ.ಈ ಬಾರಿ ಶಿರಸಿಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 68 ಮಂಡನೆಗಳು ನಡೆಯಲಿರುವುದು ವಿಶೇಷ.

ಈ ಸಮ್ಮೇಳನದಲ್ಲಿ ಕೃತಕ ಎಲುಬುಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಿ ಅನುಭವ ಪಡೆಯುವ- hands on workshop, ಕಾರ್ಯಾಗಾರ ನಡೆಯಲಿದೆ. ಈ ಸಮ್ಮೇಳನದಲ್ಲಿ 15 ವಿಷಯಗಳ ಬಗ್ಗೆ ವಿಚಾರ ವಿಮರ್ಶೆ ನೆಡೆಯಲಿದೆ.

300x250 AD

ಕಾರ್ಯಕ್ರಮದಲ್ಲಿ ಡಾ. ಮಧುಕೇಶ್ವರ ಜಿ ವಿ, ಆಯೋಜನೆಯ ಅಧ್ಯಕ್ಷರಾಗಿ, ಡಾ. ಕೈಲಾಶ್ ಪೈ ಕಾರ್ಯದರ್ಶಿಯಾಗಿ, ಡಾ. ಅಂಬರ್ ಕೋಶಾಧಿಕಾರಿಯಾಗಿ, ಹಾಗೂ ಡಾ. ಗೌತಮ್ ಶೇಟ್ ಉಪ ಕಾರ್ಯದರ್ಶಿಯಾಗಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top