ಯಲ್ಲಾಪುರ: ವಿಕಾಸ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಸ್ಪರ್ಧಾತ್ಮಕ ಯುಗದಲ್ಲಿಯೂ ಕಳೆದ ಸಾಲಿನಲ್ಲಿ 1.20 ಕೋಟಿ ರೂ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.
ಅವರು ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘ 8.72 ಕೋಟಿ ಕಾಯ್ದಿಟ್ಟ ನಿಧಿ ಹೊಂದಿದ್ದು, 174.89 ಕೋಟಿ ಠೇವು ಹೊಂದಿದೆ. ಸಾಲ ವಸೂಲಾತಿ ಪ್ರಮಾಣ ಶೇ.94.64 ಆಗಿದೆ ಎಂದರು. ಸೆ.23 ರಂದು ಮಧ್ಯಾಹ್ನ 3 ಕ್ಕೆ ಅಡಕೆ ಭವನದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ ಎಂದರು.
ಬ್ಯಾಂಕ್ ನ ಉಪಾಧ್ಯಕ್ಷೆ ಅಪರ್ಣಾ ಘಟ್ಟಿ, ನಿರ್ದೇಶಕರಾದ ರಾಜೇಂದ್ರ ಬದ್ದಿ, ಅನಿತಾ ಹೆಗಡೆ, ನಾಗೇಶ ದೇವಳಿ, ಎಸ್.ಕೆ.ಭಾಗ್ವತ, ಲೋಕೇಶ ಗಿಡ್ಡನ್, ಪ್ರಧಾನ ವ್ಯವಸ್ಥಾಪಕ ಉಮೇಶ ಭಾಗ್ವತ ಇದ್ದರು.