Slide
Slide
Slide
previous arrow
next arrow

ಸ್ವಸ್ಥ ಬಾಳಿಗೆ ಫಿಸಿಯೋಥೆರಪಿ ದೀವಿಗೆ: ಡಾ. ಚಿಂತಾಮಣಿ

300x250 AD

ಶಿರಸಿ: ಪ್ರತಿಯೊಬ್ಬರಿಗೂ ತಾವು ನೆಮ್ಮದಿಯಿಂದ ಇರಬೇಕು, ಸಂತೋಷವಾಗಿರಬೇಕು ಆರೋಗ್ಯದಿಂದಿರಬೇಕು ಎಂಬುದು ಸಹಜವಾಗಿಯೇ ಇರುತ್ತದೆ. ಆದರೆ ಇವೆಲ್ಲಕ್ಕೂ ಮೂಲ ಉತ್ತಮ ಆರೋಗ್ಯವನ್ನು‌‌ ಕಾಪಾಡುವದು ಎಂದು ಖ್ಯಾತ ಸಾಹಿತಿ, ಕವಿ, ವಿದ್ವಾಂಸ. ಡಾ. ಚಿಂತಾಮಣಿ ಕೊಡ್ಲಕೆರೆ ಹೇಳಿದರು.

ಅವರು ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಸಲಹೆ ನೀಡಲು ಆಗಮಿಸಿರುವ ಡಾಕ್ಟರ್ ನವೀನ್ ಅವರು ಹಲವಾರು ಆಯಾಮಗಳನ್ನು ಒಳಗೊಂಡಿರುವ ಫಿಜಿಯೋಥೆರಪಿ ಕುರಿತು ವಿವರವಾಗಿ ತಿಳಿಸಿ,ನಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ನಡೆಸಲು, ಸ್ವಾಸ್ಥ್ಯ ಕಾಪಾಡಲು ದೇವರು ಅತಿ ವೈಶಿಷ್ಟ್ಯಪೂರ್ಣ ದೇಹರಚನೆ ಮಾಡಿದ್ದು ಅತ್ಯಂತ ಸೋಜಿಗ ಎಂದು ಹೇಳಿ, ಅನೇಕ ನೋವು ತಾಪಗಳಿಗೆ ಸರಳ ಉಪಾಯ ತಿಳಿಸಿದರು. ಸಭಿಕರ ಅನೇಕ ಸಂದೇಹಗಳಿಗೆ ಅವರು ಪರಿಹಾರ ತಿಳಿಸಿದರು.

ಈ ಸಂದರ್ಭದಲ್ಲಿ ಜನಪ್ರಿಯ ಕಥೆಗಾರ 25 ಕ್ಕೂ ಹೆಚ್ಚು ಕೃತಿ ರಚನೆ ಮಾಡಿರುವ ಹಿರಿಯ ಸಾಹಿತಿ ಸತ್ಯಬೋಧ ಅವರನ್ನು ಸನ್ಮಾನಿಸಲಾಯಿತು. ತಾವು ನಿವೃತ್ತಿಯ ನಂತರ ಸಾಹಿತ್ಯದಲ್ಲಿ ತೊಡಗಿಕೊಂಡಿರುವದನ್ನು, ತಮ್ಮ ಸಾಹಿತ್ಯಾನುಭವ ಹಂಚಿಕೊಂಡು, ಸನ್ಮಾನಿಸಿರುವದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕವಿಪ್ರನಿನಿ ನಿವೃತ್ತ ನಿಯಂತ್ರಣ ಅಧಿಕಾರಿ (ಹಣಕಾಸು), ಸುಮಧುರ ಗಾಯಕ ಶ್ರೀ ನರಸಿಂಹ ಭಟ್ ಅವರು ಸುಶ್ರಾವ್ಯವಾಗಿ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಉಗಾಭೋಗ, ಪುರಂದರ ದಾಸರ, ಕನಕ ದಾಸರ,  ವಿಜಯದಾಸರ, ವಾದಿರಾಜರ ಅನೇಕ ಕೃತಿಗಳನ್ನು, ದೇವರನಾಮ ಗಳನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಅವರಿಗೆ ಹಾರ್ಮೋನಿಯಂ ನಲ್ಲಿ ಸುರೇಶ್ ಎಸ್, ತಬಲಾದಲ್ಲಿ ನಂದಮೋಹನ್ ಮತ್ತು ಶ್ರೀಹರಿ ಭಟ್ ಕೊಳಲು ಸಹಕಾರ ನೀಡಿ ಸಂಗೀತ ಕಾರ್ಯಕ್ರಮಕ್ಕೆ ಮೆರೆಗು ನೀಡಿದರು

300x250 AD

ಶ್ರೀಮತಿ ಶ್ರೀ ವಾಣಿ ಪ್ರಾರ್ಥನೆ ಹಾಡಿದರು; ಶ್ರೀಮತಿ ಶ್ರೀದೇವಿ ಸಾಲಿಮಠ ಪ್ರಸ್ತಾವನೆ ಮಾಡಿದರೆ ಶ್ರೀಮತಿ ಇಂದಿರಾ ಪಾಂಡುರಂಗ ರಾವ್ ಅವರು ಸ್ವಾಗತ ಕೋರಿದರು. ಪ್ರಕಾಶಕಿ ವಿಶಾಲಾಕ್ಷಿ ಶರ್ಮಾ ಪರಿಸರ ಪಾಠ ಹೇಳಿ ಮಣ್ಣಿನ ಮಹತ್ವ ತಿಳಿಸಿಕೊಟ್ಟರು. 

ಅಂಕಣಕಾರ ಧೀರೇಂದ್ರ ನಾಗರಹಳ್ಳಿ ಹಾಗೂ ಚಿಂತಾಮಣಿ ಸಭಾಹಿತ ಗಣ್ಯರ ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕವಿ ಕೆ ವಿ ಲಕ್ಷ್ಮಣ ಮೂರ್ತಿ, ಡಾ.ಕಲ್ಪನಾ, ಗೌರಿ ಪಂಡಿತ, ಗೀತಾ ಸಭಾಹಿತ, ಸಂಘದ ಪ್ರಮುಖರಾದ ರಾಮಚಂದ್ರ ರೆಡ್ಡಿ ಗೋಪಾಲ, ನಾಗಿರೆಡ್ಡಿ, ಸತ್ಯನಾರಾಯಣ,
ಈರಪ್ಪ, ಸುಚೇತನ ಬಿ. ವಾಸುದೇವ ಕಾರಂತ ಮುಂತಾದ ಗಣ್ಯರು
ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಪೂರ್ಣಿಮಾ ಗೋಪಾಲ  ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top