ಕಾರವಾರ: ಆಟೋ ಓಡಿಸಿ ಜೀವನ ನಡೆಸುತ್ತಿದ್ದ ಲಿಪೋನಿಯೋ ಮಾನುವಲ್ ಡಿಸೋಜಾ (59) ಎಂಬಾತರು ಮೀನು ಹಿಡಿಯಲು ಹೋಗಿ ಸಾವನಪ್ಪಿದ್ದಾರೆ.
ಕಡವಾಡದ ತಾರಿವಾಡದ ಲಿಪೋನಿಯೋ ಕಡವಾಡ – ಕಾರವಾರ ಮಾರ್ಗದಲ್ಲಿ ಆಟೋ ಓಡಿಸುತ್ತಿದ್ದರು. ಸೆ.8ರಂದು ಸಹ ಆಟೋ ಓಡಿಸಿ ಸಂಜೆ 6 ಗಂಟೆಗೆ ಮನೆಗೆ ಬಂದಿದ್ದರು. ಅದಾದ ನಂತರ ಮೀನು ಹಿಡಿಯುವುದಕ್ಕಾಗಿ ಕಡವಾಡದ ಸುಂಕೇರಿಗೆ ತೆರಳಿದ್ದರು. ಅಲ್ಲಿನ ಸೇತುವೆ ಬಳಿ ಮೀನು ಹಿಡಿಯುವಾಗ ಕಾಲು ಜಾರಿ ಕಾಳಿ ನದಿಗೆ ಬಿದ್ದು ಕಣ್ಮರೆಯಾದರು.
ಭಾನುವಾರ ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ಸೋಮವಾರ ಬೆಳಗ್ಗೆ ಅವರ ಶವ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅವರ ಪತ್ನಿ ರೋಸಾರಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದರು.