Slide
Slide
Slide
previous arrow
next arrow

ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು

300x250 AD

ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತ್ಯೈಧಾಃ ಸಪ್ತ ವಾಹನಃ| ಅಮೂರ್ತಿರನಘೋsಚಿಂತ್ಯೋ ಭಯಕೃದ್ ಭಯನಾಶನಃ ||

ಭಾವಾರ್ಥ:- ಸಹಸ್ರ ಅಂದರೆ ಲೆಕ್ಕವಿಲ್ಲದಷ್ಟು ಅರ್ಚಿಗಳು (ಕಿರಣಗಳು) ಯಾರಿಗೆ ಇವೆಯೋ ಆತನು ‘ಸಹಸ್ರಾರ್ಚಿಯು’. ಏಳು ನಾಲಿಗೆಗಳು ಈತನಿಗೆ ಇವೆ. ಆದ್ದರಿಂದ ‘ಸಪ್ತ ಜಿಹ್ವನು’.ಏಳು ರೀತಿಯ ಜ್ವಾಲೆಗಳು ಹೊಂದಿರುವ ಅಗ್ನಿ ನಾರಾಯಣನು ಇವನೇ ಆಗಿದ್ದರಿಂದ ‘ಸಪ್ತ್ಯೆದಾಃ’. ಎಂಬ ಹೆಸರು. ಏಳು ಕುದುರೆಗಳು ಇವನಿಗೆ ವಾಹನಗಳು,ಆದ್ದರಿಂದ ಸಪ್ತ ವಾಹನನು, ಎಂದರೆ ಸೂರ್ಯನು.ಅಥವಾ ‘ಸಪ್ತ’ಎಂಬ ಹೆಸರಿನ ಕುದುರೆಯು ಈತನಿಗೆ ವಾಹನನು, ಎಂಬರ್ಥದಿಂದಲೂ ‘ಸಪ್ತವಾಹನನು’. ‘ಸಪ್ತ ಎಂಬ ಹೆಸರಿನ ಒಂದೇ ಕುದುರೆಯು ಇವನನ್ನು ಹೊರುತ್ತದೆ’ ಎಂಬ ಶ್ರುತಿಯು ಇದಕ್ಕೆ ಪ್ರಮಾಣ.’ಅಮೂರ್ತಿ’ ಎಂದರೆ ರೂಪರಹಿತನು. ಪರಮಾತ್ಮನು ಸರ್ವವ್ಯಾಪಿಯಾದುದರಿಂದ ಯಾವುದೇ ರೂಪವಿಲ್ಲ.ರೂಪವಿರುವ ವಸ್ತು ನಶ್ವರವೂ, ಇವನು ಶಾಶ್ವತನೂ ಎಂದೂ ಅರ್ಥಬರುತ್ತದೆ.ಮನಸ್ಸು ಬುದ್ಧಿಗಳಿಂದ ಇವನ ಸ್ವರೂಪವನ್ನು ಚಿಂತಿಸಲಿಕ್ಕೆ ಆಗುವದಿಲ್ಲ. ಆದ್ದರಿಂದ ‘ಅಚಿಂತ್ಯನು’.ದುರ್ಮಾರ್ಗಿಗಳಿಗೆ ಭಯವನ್ನು ಉಂಟು ಮಾಡುತ್ತಾನೆ. ಭಕ್ತರ ಭಯವನ್ನು ಕತ್ತರಿಸುತ್ತಾನೆ (ನಾಶಮಾಡುತ್ತಾನೆ.) ಆದ್ದರಿಂದ’ಭಯಕೃತ್’. ವರ್ಣಾಶ್ರಮಗಳ ಆಚಾರವುಳ್ಳವರ ಭಯ(ಅಂಜಿಕೆ) ನಾಶಗೊಳಿಸುತ್ತಾನೆ ಆದ್ದರಿಂದ’ಭಯನಾಶನನು’.

ಸ್ತೋತ್ರದ ವೈಶಿಷ್ಟ್ಯತೆ: ಈ ಶ್ಲೋಕವನ್ನು ಧನಿಷ್ಠಾ ನಕ್ಷತ್ರದ ೧ನೇ ಪಾದದಲ್ಲಿ ಜನಿಸಿದವರು ಪ್ರತಿದಿನ ೧೧ ಬಾರಿ ಹೇಳಿಕೊಳ್ಳಬೇಕಾದದ್ದು ಇರುತ್ತದೆ. ಆದರೆ ಭಯದ ಸಮಸ್ಯೆ ಇರುವ ಎಲ್ಲರೂ ಹೇಳಿಕೊಳ್ಳಬಹುದಾಗಿದೆ.ಜೀವನವೆಂದರೆ ಕಷ್ಟ,ಸುಖಗಳ ಮಿಶ್ರಣ. ಆದರೆ ಕೆಲವರಿಗೆ ಜೀವನದಲ್ಲಿ ಪದೇ ಪದೇ ಬರುವ ಭಯ, ಆತಂಕ ಆಪತ್ತು,ವಿಪತ್ತುಗಳ ಸಾಧ್ಯತೆಯಿಂದ ಭಯ ಬರುತ್ತದೆ.ಹಾಗೆ ರೋಗ ರುಜಿನಗಳ ಭಯ, ಆರ್ಥಿಕ ತೊಂದರೆಯಿಂದಾದ ಭಯ , ಮಕ್ಕಳಿಗೆ ಪರೀಕ್ಷೆಯ ಭಯ, ಪ್ರೀತಿ ಪ್ರೇಮ ಮಾಡುವ ಯುವಕ ಯುವತಿಯರಿಗೆ ಅದು ಎಲ್ಲಿ ಮುರಿದು ಬೀಳುತ್ತದೋ ಎಂಬ ಭಯ, ಸೊಸೆಗೆ ಅತ್ತೆಯ ಭಯ, ಅತ್ತೆಗೆ ಸೊಸೆಯ ಭಯ.ಹೀಗೆ ಚಿತ್ರ ವಿಚಿತ್ರ ಭಯ,ಆತಂಕಗಳಿಂದ ಒದ್ದಾಡುತ್ತಿರುವವವರಿಗೆ ಅಂತಹ ಭಯ, ಆತಂಕದ ನಿವಾರಣೆಗಾಗಿ ಈ ಮೇಲಿ ಸ್ತೋತ್ರವನ್ನು ಎಲ್ಲರೂ ಹೇಳಿಕೊಳ್ಳಬಹುದಾಗಿದೆ.

300x250 AD

(ಸಂ:-ಡಾ. ಚಂದ್ರಶೇಖರ ಎಲ್.ಭಟ್. ಬಳ್ಳಾರಿ)

Share This
300x250 AD
300x250 AD
300x250 AD
Back to top