Slide
Slide
Slide
previous arrow
next arrow

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದ ತಾಯಿ-ಮಕ್ಕಳ ಆರೈಕೆ ಆಸ್ಪತ್ರೆಗೆ ವಿವಿಧ ಪರಿಕರಗಳ ವಿತರಣೆ

300x250 AD

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಸರಕಾರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ 8.50 ಲಕ್ಷ ರೂಪಾಯಿ ಮೊತ್ತದ ವಿವಿಧ ಪರಿಕರಗಳನ್ನು ಸೋಮವಾರ ವಿತರಿಸಲಾಯಿತು. ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಅತಿ ಅವಶ್ಯವಾಗಿ ಬೇಕಾಗಿದ್ದ ಅನಸ್ತೇಶಿಯ ಯಂತ್ರ, ಓಟಿ ಟೇಬಲ್ ಮತ್ತು ಓಟಿ ಮಾನಿಟರ್‌ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು ರಾಜೇಶ ತಿವಾರಿ ಅವರು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಮಾರ್ಗದರ್ಶನದಲ್ಲಿ ಆರೋಗ್ಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಆದ ರೀತಿಯಲ್ಲಿ ನೆರವನ್ನು ನೀಡುತ್ತಾ ಬಂದಿದೆ. ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಅತಿ ಅವಶ್ಯವಾಗಿ ಬೇಕಾಗಿದ್ದ ಪರಿಕರಗಳನ್ನು ಒದಗಿಸಿಕೊಡುವ ಮೂಲಕ ಇಲ್ಲಿಗೆ ಬರುವಂತಹ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೇವೆ ನೀಡಲು ಸಹಕಾರಿಯಾಗಬೇಕೆಂಬ ಆಶಯ ಕಾಗದ ಕಾರ್ಖಾನೆಯದ್ದಾಗಿದೆ ಎಂದರು.

ಪರಿಕರಗಳನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಖಿಲ್ ಕಿತ್ತೂರು ಅವರು ಆಸ್ಪತ್ರೆಗೆ ಅತಿ ಅವಶ್ಯವಾಗಿ ಬೇಕಾಗಿದ್ದ ಪರಿಕರಗಳನ್ನು ಕಾಗದ ಕಾರ್ಖಾನೆ ನೀಡುವ ಮೂಲಕ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ಕಾಗದ ಕಾರ್ಖಾನೆಯ ಈ ಸೇವೆ ಮಹತ್ವಪೂರ್ಣವಾದ ಸೇವೆಯಾಗಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಕೀರ್ತಿ ಸಾಳೊಂಕೆ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ್ ಕುಲಕರ್ಣಿ, ರಾಜು ರೋಸಯ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top