ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನಸೂರಿನ ಮೊಹಮ್ಮದ್ ಕೈಫ್ ಅಬುಬಕ್ಕರ್ ಸಾಬ್ (19) ಹಾಗೂ ಚಂದನ ಶ್ರೀಧರ ಆಚಾರಿ (19)ಬಂಧಿತ ಆರೋಪಿಗಳು.
ಆರೋಪಿಗಳು ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ್ದ 7ಸಾವಿರ ರೂ. ಮೌಲ್ಯದ ಸೋಲಾರ್ ಬೀದಿ ದೀಪದ ಬ್ಯಾಟರಿ ಹಾಗೂ ಮುಠ್ಠಳ್ಳಿಯ ಸುಧಾಕರ ಮಡಿವಾಳ ಎಂಬುವವರ ಮನೆಯ ಹತ್ತಿರ ಅಳವಡಿಸಿದ್ದ 7ಸಾವಿರ ಮೌಲ್ಯದ ಸೋಲಾರ್ ಬ್ಯಾಟರಿಗಳನ್ನು ಅದಲ್ಲದೆ ಸಿದ್ದಾಪುರ ಪಟ್ಟಣದ ನೆಹರೂ ಮೈದಾನದ ಪಾರ್ಕ್ನಲ್ಲಿ ಅಳವಡಿಸಿದ್ದ 4ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಿದ್ದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಸುಮಾರು 66ಸಾವಿರ ರೂ ಮೌಲ್ಯದ 10ಸೋಲಾರ್ ಬ್ಯಾಟರಿಗಳು ಹಾಗೂ ಕೃತ್ಯಕ್ಕೆ ಬಳಸಲಾದ ಬೈಕ್‌ನನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆ ಸಿಪಿಐ ಕುಮಾರ ಕೆ. ಪಿಎಸ್‌ಐ ಗಳಾದ ಅನೀಲ ಬಿ.ಎಂ,ಗೀತಾ ಶಿರ್ಸಿಕರ್ ಹಾಗೂ ಸಿಬ್ಬಂದಿಗಳಾದ ರಮೇಶ ಕೂಡಾಲ, ದೇವರಾಜ ನಾಯ್ಕ,ರವಿ ಕ್ಯಾಲಕೊಂಡ ,ಮೋಹನ ಗಾವಡಿ,ಸುನೀಲ ಜಂಗಲಿ, ಶಶಿಕಾಂತ ನಾಯ್ಕ ಪಾಲ್ಗೊಂಡಿದ್ದರು.