ಸಿದ್ದಾಪುರ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ನಶಿಸಿ ಹೊಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ತಾಲೂಕಿನ ನಾಣಿಕಟ್ಟಾ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಲ್ಲಿ ಶತ ಸಂಪನ್ನ ಸಭಾಭವನದಲ್ಲಿ ಆ.28, ಬುಧವಾರ ಮಧ್ಯಾಹ್ನ 2-00 ಗಂಟೆಯಿಂದ “ಕೈ ಚಕ್ಕುಲಿ ಕಂಬಳ” ಕೈ ಚಕ್ಕುಲಿ ಹಬ್ಬವನ್ನು ಆಯೋಜಿಸಲಾಗಿದೆ. ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಕೈ ಯಲ್ಲಿ ಸುತ್ತಿದ ಚಕ್ಕುಲಿ ಕೇವಲ ರುಚಿ ಅಷ್ಟೇ ಅಲ್ಲದೇ, ಹೆಚ್ಚುದಿನ ಇಟ್ಟುಕೊಂಡು ತಿನ್ನಲು ಯೋಗ್ಯವಾಗಿದ್ದು, ಸರ್ವರೂ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಆ.28ಕ್ಕೆ ‘ಕೈ ಚಕ್ಕುಲಿ ಕಂಬಳ’: ಪ್ರದರ್ಶನ, ಮಾರಾಟ
