ದಾಂಡೇಲಿ : ಧಾರ್ಮಿಕ, ಸಾಮಾಜಿಕ, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಜನಮುಖಿ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ದಾಂಡೇಲಿ ತಾಲೂಕಿನ ಆಲೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಆಶ್ರಯದಡಿ ಭಾನುವಾರ ಹಳಿಯಾಳ ತಾಲೂಕಿನ ದತ್ತು ಗ್ರಾಮಗಳಾದ ಪಾಂಡರವಾಳ ಮತ್ತು ಜಾವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ದಂತ ಚಿಕಿತ್ಸಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಶಿಬಿರದ ವೈದ್ಯರುಗಳಾಗಿ ಖ್ಯಾತ ದಂತ ವೈದ್ಯರುಗಳಾದ ಡಾ.ವೆಂಕಟೇಶ ಮತ್ತು ಡಾ. ಗಿರಿಜಾ ಅವರು ಭಾಗವಹಿಸಿ ದಂತ ತಪಾಸನೆ ಮತ್ತು ಚಿಕಿತ್ಸೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ರಾಜ್ಯ ಸಂಯೋಜಕರಾದ ಶಿವರಾಜ ಗೋಣಿ, ಆಲೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾದ ಗಣಪತಿ ಬೇಕಣಿ, ಸಮಿತಿಯ ಸೇವಾ ಸಂಯೋಜಕರಾದ ಮಾರುತಿ ಸಾವಂತ, ಸುವರ್ಣಾ ಮಿರಾಶಿ, ಜ್ಞಾನೇಶ್ವರ ದಾಮನೇಕರ, ಜೈರಾಮ್ ಪ್ರಭು, ದಯಾನಂದ ಡೋಬುಲಕರ, ಸುರೇಶ ದಾಮನೇಕರ ಹಾಗೂ ಶ್ರೀ ಸತ್ಯಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 200 ಕ್ಕೂ ಅಧಿಕ ಜನರು ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.