ದಾಂಡೇಲಿ : ದಾಂಡೇಲಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಬೇಕು, ಸ್ಥಗಿತಗೊಂಡಿರುವ ಮಂಗಳೂರು ಮತ್ತು ಪೂನಾ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಹಾಗೂ ದಾಂಡೇಲಿಯಿಂದ ಧಾರವಾಡಕ್ಕೆ ಇನ್ನು ಹೆಚ್ಚಿನ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ದಾಂಡೇಲಿ ತಾಲೂಕು ಘಟಕದ ವತಿಯಿಂದ ಸೋಮವಾರ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರವಾಸೋದ್ಯಮವಾಗಿ ಬೆಳೆದು ನಿಂತ ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರಿಗೆ ಹಾಗೂ ದಾಂಡೇಲಿಯ ಸಾರ್ವಜನಿಕರಿಗೆ ದಾಂಡೇಲಿಯಿಂದ ಗೋವಾಕ್ಕೆ ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಬೇಕು. ಈಗಾಗಲೇ ಸ್ಥಗಿತಗೊಂಡಿರುವ ಮಂಗಳೂರು ಮತ್ತು ಪೂನಾ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಹಾಗೂ ದಾಂಡೇಲಿಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ದಾಂಡೇಲಿಯಿಂದ ಧಾರವಾಡಕ್ಕೆ ಇನ್ನು ಹೆಚ್ಚಿನ ಬಸ್ಸುಗಳನ್ನು ಬಿಡುವಂತೆ ಮತ್ತು ನಗರದ ಕೇಂದ್ರ ಬಸ್ ನಿಲ್ದಾಣವು ಸೋರುತ್ತಿದ್ದು ಅಜೀರ್ಣಾವಸ್ಥೆಯಲ್ಲಿದೆ. ಇದನ್ನು ದುರಸ್ತಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದಾಂಡೇಲಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್ ಎಚ್ ರಾಥೋಡ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಅಶೋಕ ಮಾನೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಾ ಮಾದರ, ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಮುಜಿಬಾ ಛಬ್ಬಿ, ತಾಲೂಕಾ ಉಪಾಧ್ಯಕ್ಷರಾದ ರವಿಮಾಳಿ, ಸಂಘಟನೆಯ ಪದಾಧಿಕಾರಿಗಳಾದ ಶಹೆಜಾದಿ ಕುಲಶಾಪುರ, ಶಾಮ್ ಬೆಂಗಳೂರು, ಅಜಯ್ ಪಾಠಕರ್, ಉಮೇಶ ಬಡಿಗೇರ, ಶಿವರಾಜ ಜೆರಕಲ್, ರಾಬರ್ಟ್, ವಹಿದ್ ಖಾನ್, ಪ್ರಮೋದ್ ರೇವಣಕರ್, ಇದ್ರಿಸ್, ಕಮಲಾ ಪ್ರಾಚೀಸ್, ವೀಣಾ ಗಜಾಕೋಶ್, ವಿಜಯಲಕ್ಷ್ಮಿ ಅಕ್ಕಿ ಮೊದಲಾದವರು ಉಪಸ್ಥಿತರಿದ್ದರು.