Slide
Slide
Slide
previous arrow
next arrow

ಸುಜ್ಞಾನ ಸೇವಾ ಫೌಂಡೇಶನ್‌ನಿಂದ ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆ

300x250 AD

ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸುಜ್ಞಾನ ಸೇವಾ ಫೌಂಡೇಶನ್(ರಿ) ಉತ್ತರಕನ್ನಡ ವತಿಯಿಂದ ನಾಲ್ಕನೇ ವರ್ಷದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2024 ಆಯೋಜಿಸಲಾಗಿದೆ. ಈ ಸ್ಪರ್ಧೆಯನ್ನು ಗೌತಮ್ ಜ್ಯುವೆಲರ್ಸ್ ಯಲ್ಲಾಪುರ, ಟಿ.ಎಸ್.ಎಸ್. ಶಿರಸಿ, ಹಾಂಗ್ಯೋ ಐಸ್ ಕ್ರೀಂ ಮತ್ತು ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ರಂಗಸಹ್ಯಾದ್ರಿ ಯಲ್ಲಾಪುರ ಇವುಗಳ  ಸಹಯೋಗದಲ್ಲಿ ಆಯೋಜಿಸಲಾಗಿದೆ.

ಆಸಕ್ತ ಪಾಲಕರು ತಮ್ಮ ಆರು ವರ್ಷದ ಒಳಗಿನ ಮಕ್ಕಳ ಮುದ್ದುಕೃಷ್ಣ ವೇಷದ ಫೋಟೋಗಳನ್ನು ಕಳಿಸಲು ಕೋರಲಾಗಿದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರಿಂದ ಆಯ್ಕೆಯಾದ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ, ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಒಂಬತ್ತು ಮಕ್ಕಳಿಗೆ ಸಮಾಧಾನಕರ ಬಹುಮಾನವಾಗಿ ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಮುದ್ದುಕೃಷ್ಣ ವೇಷದ ಫೋಟೋ ಕಳಿಸಲು ಕೊನೆಯ ದಿನಾಂಕ ಆ.24.

ಸ್ಪರ್ಧಾ ನಿಯಮಗಳು:
• ಸ್ಪರ್ಧೆಯಲ್ಲಿ ಆರು ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ, ಈ ಸ್ಪರ್ಧೆಗೆಂದೇ ಫೋಟೋ ತೆಗೆದು ಕಳಿಸಬೇಕು. (ಹಳೆಯ ಫೋಟೋಗಳಿಗೆ ಅವಕಾಶ ಇಲ್ಲ)
• ಫೋಟೋಗಳನ್ನು ಆ.24 ರ ಸಂಜೆಯ ಒಳಗೆ ಕಳಿಸಬೇಕು. ನಂತರ ಬಂದ ಫೋಟೋಗಳನ್ನು ಪರಿಗಣಿಸಲಾಗುವುದಿಲ್ಲ.
• ಎಡಿಟ್ ಮಾಡಿದ ಫೋಟೋಗಳಿಗೆ ಅವಕಾಶ ಇಲ್ಲ. • • ಸ್ಪರ್ಧೆಗೆ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಮಕ್ಕಳ ಫೋಟೋಗಳನ್ನು ಮಾತ್ರ ಕಳಿಸಬೇಕು.
• ಮಗುವಿನ ಮುದ್ದುಕೃಷ್ಣ ಫೋಟೋದೊಂದಿಗೆ ಮಗುವಿನ ಹೆಸರು, ಹುಟ್ಟಿದ ದಿನಾಂಕ ಮತ್ತು ಪಾಲಕರ ಹೆಸರು, ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಕಳಿಸಬೇಕು.
• ತೀರ್ಪುಗರರ ನಿರ್ಣಯವೇ ಅಂತಿಮವಾಗಿದೆ.
• ಸ್ಪರ್ಧೆಗೆ ಪ್ರವೇಶ ಉಚಿತವಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಸ್ಪರ್ಧಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸುಜ್ಞಾನ ಸೇವಾ ಫೌಂಡೇಶನ್(ರಿ) ಉತ್ತರಕನ್ನಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD

ಫೋಟೋ ಕಳುಹಿಸುವ ವಾಟ್ಸಪ್ ನಂಬರ್ : Tel:+918431662869
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Tel:+917899588538 ಫೋಟೋಗಳನ್ನು ಇಮೇಲ್ ಮಾಡಬಹುದು : Mailto:gnbtattigadde@gmail.com

Share This
300x250 AD
300x250 AD
300x250 AD
Back to top