Slide
Slide
Slide
previous arrow
next arrow

ಆಟವಾಡುತ್ತಲೇ ಜಗಳ ಮಾಡಿಕೊಂಡ‌ ಬಾಲಕರು: ಓರ್ವನಿಗೆ ಗಾಯ

300x250 AD

ದಾಂಡೇಲಿ: ಶಾಲೆ ಬಿಟ್ಟು ಮನೆಗೆ ಬಂದ ನಂತರ ಮನೆಯ ಹತ್ತಿರದಲ್ಲೇ ಆಟವಾಡುತ್ತಿದ್ದ ಬಾಲಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡು ರಾಡ್‌ನಿಂದ ಓರ್ವ ಬಾಲಕನ‌ ಮೇಲೆ‌ ಇನ್ನೋರ್ವ ಬಾಲಕ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ನಗರದ ಬರ್ಚಿ ರಸ್ತೆಯಲ್ಲಿ ಎಂದು ಬುಧವಾರ ಸಂಜೆ ನಡೆದಿದೆ.

ಗಾಯಗೊಂಡ ಬಾಲಕ ಆಸೀಫ್ ಆಲಿ ಎಂಬುವನಾಗಿದ್ದು, ಈತ ತನ್ನ ಗೆಳೆಯನ ಜೊತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಸೀಪ್ ಆಲಿಯ ತಲೆಯ ಮೇಲೆ ರಾಡ್‌ನಿಂದ ಇನ್ನೊರ್ವ ಬಾಲಕ ಹೊಡೆದಿದ್ದಾನೆ. ಈ ಸಮಯದಲ್ಲಿ ಆಸೀಪ್ ಆಲಿಯ ತಲೆಗೆ ಗಾಯವಾಗಿದ್ದು, ರಕ್ತ ಬಂದಿದೆ. ಗಾಯಗೊಂಡ ಆಸೀಪ್ ಆಲಿಯನ್ನು ಆತನ ತಂದೆ ಸುಲೇಮಾನ್ ಅಬ್ದುಲ್ ವಹಾಬ್‌ನವರ್ ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top