Slide
Slide
Slide
previous arrow
next arrow

ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಾನವೀಯತೆ ಮೆರೆದ ವೈದ್ಯೆ

300x250 AD

ಅಸಹಾಯಕ ಮಹಿಳೆಯ ಅಂಡಾಶಯಲ್ಲಿದ್ದ ಬೃಹತ್ ಗಡ್ಡೆ ಹೊರತೆಗೆದ ಡಾ.ವಿನೀತಾ

ಭಟ್ಕಳ : ಭಟ್ಕಳದ ನಾಯಕ ಹೆಲ್ತ್‌ ಕೇರ್‌ ಸೆಂಟರ್‌ನ ವೈದ್ಯಾಧಿಕಾರಿಗಳು ಅಸಹಾಯಕ ಬಡ ಗೃಹಿಣಿಯೊಬ್ಬಳ ಅಂಡಾಶಯದಲ್ಲಿದ್ದ ಬೃಹತ್‌ ಗಡ್ಡೆಯನ್ನು ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತಗೆದು ಮಾನವೀಯತೆ ಮೆರೆದಿದ್ದಾರೆ.

ಮುರುಡೇಶ್ವರದ ತೆರನಮಕ್ಕಿಯ 49 ವರ್ಷ ಗೃಹಿಣಿಯೊಬ್ಬರು ಕಳೆದ 2 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಗ್ಯಾಸ್ಟ್ರಿಕ್ ಇರಬಹುದು ಎಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ರೆ ನೋವು ಕಡಿಮೆಯಾಗದೇ ಮತ್ತಷ್ಟು ಉಲ್ಬಣಿಸಿದ್ದನ್ನುನ ಕಂಡು, ಹೊಟ್ಟೆಯ ಮಧ್ಯ ಭಾಗದಲ್ಲಿ ಊತ ಕಂಡು ಬಂದ ನಿಮಿತ್ತ ಮುಂದಿನ ಚಿಕಿತ್ಸೆಗಾಗಿ ಭಟ್ಕಳದ ನಾಯಕ್ ಹೆಲ್ತ್ ಸೆಂಟರ್‌ಗೆ ತೆರಳಿ, ಸ್ತ್ರೀ ರೋಗ ತಜ್ಞೆ ಡಾ. ವಿನೀತಾ ನಾಯಕ್ ಅವರ ಬಳಿ ತೋರಿಸಿದ್ದಾರೆ. ತಕ್ಷಣ ಹೊಟ್ಟೆಯ ಸ್ಕ್ಯಾನ್ ಮತ್ತು ಇತರೇ ರಕ್ತ ಪರೀಕ್ಷೆ ನಡೆಸಿದ ಡಾ. ವಿನೀತಾ ನಾಯಕ್‌ ಅವರಿಗೆ, ಸುಮಾರು 28 ಸೆಮಿ ಉದ್ಧ 18 ಸೆಮಿ ಅಗಲ 15 ಸೆಮಿ ದಪ್ಪದ 4.65 ಕೆ.ಜಿ ತೂಕದ ಗಡ್ಡೆ ಮಹಿಳೆಯ ಅಂಡಾಶಯದಲ್ಲಿರುವುದು ಗೊತ್ತಾಗಿದೆ.

300x250 AD

ಇನ್ನು ಮಹಿಳೆಯ ಕುಟುಂಬದವರು ತುಂಬಾ ಬಡವರಿದ್ದು ಖಾಸಗಿ ಆಸ್ಪತ್ರೆಯಲ್ಲಿ ತುಂಬಾ ಖರ್ಚು ಬರಬಹದು ಎಂದು ಆಯುಷ್ಮಾನ್ ಭಾರತ್ ಕಾರ್ಡ್‌ನಿಂದ ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಲು ಹೊನ್ನಾವರದಲ್ಲಿ ವಿಚಾರಿಸಿದ್ದಾರೆ. ಇವರ ಅಸಾಹಕತೆಯನ್ನು ಮನಗಂಡ ನಾಯಕ್ ಹೆಲ್ತ್ ಸೆಂಟರ್ ಭಟ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಯಾವುದೇ ಹೆಚ್ಚಿನ ವೆಚ್ಚ ಭರಿಸದೆ ಕಡಿಮೆ ಖರ್ಚಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ವಿಶ್ವಾಸ ತುಂಬಿದ್ದಾರೆ. ತಕ್ಷಣ ಡಾ.ವಿನಿತಾ ನಾಯಕ್ ಮತ್ತು ಅವರ ವೈದ್ಯಕೀಯ ತಂಡ ಬೃಹತ್ ಗಾತ್ರದ ಗಡ್ಡೆಯನ್ನು ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದೆ. ರೋಗಿಯು ಈಗ ಚೇತರಿಸಿಕೊಳ್ಳುತಿದ್ದಾರೆಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top