ಸಿದ್ದಾಪುರ : ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ವಿಪರೀತ ಮಳೆ ಸುರಿದ ಕಾರಣ ಹಲವು ಬಡವರ ಮನೆಯ ಮಾಳಿಗೆ, ಗೋಡೆ, ಕೊಟ್ಟಿಗೆಗಳಿಗೆ ಹಾನಿಯಾಗಿದ್ದು ಅವರಿಗೆ ವಸತಿ ಪುನರ್‌ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಧನ ಸಹಾಯ ನೀಡುವ ಮೂಲಕ ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಆ.10 ಮತ್ತು 11 ರಂದು ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜನಹಿತ ಸೇವಾ ಫೌಂಡೇಶನ ಅಧ್ಯಕ್ಷ ಕಾರ್ಯಕ್ರಮದ ಆಯೋಜಕ ಲೋಕೇಶ ಹೆಗಡೆ ತಿಳಿಸಿದ್ದಾರೆ.ಹಾಲಾಡಿ ಮೇಳದ ಪ್ರಬುದ್ಧ ಕಲಾವಿದರಿಂದ ‘ಹಂಸ ಪಲ್ಲಕ್ಕಿ’ ಎನ್ನುವ ಯಕ್ಷಗಾನ ಆಖ್ಯಾನವನ್ನು ಎರಡು ದಿನ ಹಮ್ಮಿಕೊಳ್ಳಲಾಗಿದೆ.
ಆ.10 ಕ್ಕೆ ಸಿದ್ದಾಪುರ ಶಂಕರಮಠದಲ್ಲಿ ಸಂಜೆ 5 ರಿಂದ, ಆ.11 ಕ್ಕೆ ಯಲ್ಲಾಪುರದ ಮಂಚಿಕೇರಿ ರಾಜರಾಜೇಶ್ವರಿ ರಂಗಮಂದಿರದಲ್ಲಿ ಸಂಜೆ 5 ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾನವೀಯತೆ ಮೆರೆಯುವ ಈ ಕಾರ್ಯಕ್ರಮಕ್ಕೆ ಸುತ್ತಮುತ್ತ ಇರುವ ಎಲ್ಲಾ ಯಕ್ಷಗಾನ ಕಲಾಭಿಮಾನಿಗಳು ತನು ಮನ ಧನ ಸಹಕಾರ ಮಾಡಿ, ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕೆಂದು ಲೋಕೇಶ ಹೆಗಡೆ ವಿನಂತಿಸಿದ್ದಾರೆ.
ಈಗಾಗಲೇ ಸಿದ್ದಾಪುರ ಕೋಲ್‌ಸಿರ್ಸಿ ಗ್ರಾಮದ ಒಂದು ಕುಟುಂಬಕ್ಕೆ ಧನ ಸಹಾಯ ನೀಡಿ ಅವರ ಕಷ್ಟ ಸುಖ ಆಲಿಸಿದ್ದೇವೆ. ಇದೇ ರೀತಿ ಇನ್ನೂ ಅನೇಕ ಕುಟುಂಬಗಳಿಗೆ ನೆರವು ಆಗಬೇಕಾಗಿದೆ, ಆದುದರಿಂದ ಸಹೃದಯಿ ಕಲಾಭಿಮಾನಿಗಳು ಈ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿ ನಮ್ಮ ಕಾರ್ಯಕ್ಕೆ ಕೈ ಜೋಡಿಸಿ:: ಲೊಕೇಶ ಹೆಗಡೆ ಯಕ್ಷಗಾನ ಆಯೋಜಕ.